ಬಾಂಗ್ಲಾದೇಶದ ಶೋಚನೀಯ ಪ್ರವಾಸವನ್ನು ಪಾಕಿಸ್ತಾನ ಮುಂದುವರಿಸಿದ್ದು, ಆತಿಥೇಯ ಬಾಂಗ್ಲಾ ಪ್ರಥಮ ಟಿ20 ಜಯವನ್ನು ಪಾಕ್ ವಿರುದ್ಧ ದಾಖಲಿಸಿದೆ. ಬಾಂಗ್ಲಾ ವಿರುದ್ಧ ಏಕದಿನ ಸರಣಿಯನ್ನು 0-3ರಿಂದ ವಾಶ್ ಔಟ್ ಆಗಿದ್ದ ಪಾಕಿಸ್ತಾನ ಮತ್ತೆ ತನ್ನ ಸೋಲಿನ ಸರಣಿಯನ್ನು ಮುಂದುವರಿಸಿದೆ.
ನಂತರ ಬಾಂಗ್ಲಾ ಪರ ಶಕೀಬ್ ಅಲ್ ಹಸನ್ ಮತ್ತು ಸಬೀರ್ ರೆಹ್ಮಾನ್ ಅಜೇಯ ಅರ್ಧಶತಕಗಳನ್ನು ಬಾರಿಸಿ 17ನೇ ಓವರಿನಲ್ಲೇ ಪಾಕ್ ಗುರಿಯನ್ನು ಮುಟ್ಟಿದರು. ಶಕೀಬ್ 41 ಎಸೆತಗಳಲ್ಲಿ ಅಜೇಯ 57 ರನ್ ಮತ್ತು ಸಬ್ಬೀರ್ ಅಜೇಯ 51 ರನ್ ನೆರವಿನೊಂದಿಗೆ ನಾಲ್ಕನೇ ವಿಕೆಟ್ಗೆ 105 ರನ್ ಕಲೆಹಾಕುವ ಮೂಲಕ ಬಾಂಗ್ಲಾಗೆ ಗೆಲುವನ್ನು ತಂದಿತ್ತರು. 6ನೇ ಓವರಿನಲ್ಲಿ 3 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿದ್ದ ಬಾಂಗ್ಲಾ ಒಂದು ಹಂತದಲ್ಲಿ 3 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು.