2ನೇ ಟೆಸ್ಟ್: ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು 244 ರನ್

ಗುರುವಾರ, 30 ಜುಲೈ 2015 (16:26 IST)
ಬಾಂಗ್ಲಾದೇಶ  ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು 244 ರನ್ ಮೊತ್ತವನ್ನು ಗಳಿಸಿದೆ. ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಅವರು ಡೇಲ್ ಸ್ಟೇನ್ ಬೌಲಿಂಗ್‌ನಲ್ಲಿ ಆರಂಭದಲ್ಲಿ ಆಮ್ಲಾಗೆ ಕ್ಯಾಚಿತ್ತು ಔಟಾದರು. 
 
ದಕ್ಷಿಣ ಆಫ್ರಿಕಾದ ಆಫ್ ಸ್ಪಿನ್ ಬೌಲರ್ ಡುಮಿನಿ ಎರಡು ಕ್ಷಿಪ್ರ ವಿಕೆಟ್‌ಗಳನ್ನು ಕಬಳಿಸಿ ಬಾಂಗ್ಲಾದೇಶ ಟೀವೇಳೆಗೆ 154ಕ್ಕೆ 3 ವಿಕೆಟ್ ಕಳೆದುಕೊಂಡಿತು. ಮಾಮಿನುಲ್ ಹಕ್  ಡುಮಿನಿ ಬೌಲಿಂಗ್‌ನಲ್ಲಿ ಬ್ಯಾಟಿಂಗ್ ತುದಿಗೆ ಚೆಂಡು ತಾಗಿ ಡೇನ್ ವಿಲಾಸ್ ಕೈಗೆ ಕ್ಯಾಚಿತ್ತರು. ಇದರಿಂದ ಹಕ್ ಅವರು ಇಮ್ರುಲ್ ಕಾಯೇಸ್ ಜತೆ 69 ರನ್ ಜೊತೆಯಾಟಕ್ಕೆ ತೆರೆಬಿತ್ತು.

ಮಾಮಿನುಲ್ ಹಕ್ ಬೆನ್ನ ಹಿಂದೆಯೇ  ಡುಮಿನಿ ಮುಂದಿನ ಓವರಿನಲ್ಲಿ ಕಾಯೇಸ್ ಅವರನ್ನು ಔಟ್ ಮಾಡಿದರು.  ನಾಯಕ ಮುಷ್ಫಿಕುರ್ ರಹೀಮ್ ಮತ್ತು ಮಹಮ್ಮದುಲ್ಲಾ ರಿಯಾದ್ ನಂತರ ಇನ್ನಿಂಗ್ಸ್‌ಗೆ ಸ್ಥಿರತೆ ತಂದು 68 ರನ್ ಜೊತೆಯಾಟ ನೀಡಿದರು. ರಹೀಮ್ ಎಲ್ಗಾರ್ ಬೌಲಿಂಗ್‌ನಲ್ಲಿ ಡೇನ್ ವಿಲಾಸ್‌ಗೆ ಕ್ಯಾಚಿತ್ತು ಔಟಾದಾಗ ಅವರು 65 ರನ್ ಸ್ಕೋರ್ ಮಾಡಿದ್ದರು. 
 
ಮಹಮ್ಮದುಲ್ಲಾ 18 ರನ್‌ಗಳಾಗಿದ್ದಾಗ ಡೇಲ್ ಸ್ಟೇನ್ ಬೌಲಿಂಗ್‌ನಲ್ಲಿ ಅಂಪೈರ್ ಎಲ್‌ಬಿಡಬ್ಲ್ಯು ನೀಡಿದರು. ಆದರೆ ರಿಪ್ಲೇನಲ್ಲಿ ಚೆಂಡು ಬ್ಯಾಟಿನ ತುದಿಗೆ ತಾಗಿದ್ದು ಕಂಡಿದ್ದರಿಂದ ರಿವ್ಯೂನಲ್ಲಿ ತೀರ್ಪನ್ನು ರದ್ದುಮಾಡಲಾಯಿತು. 

ವೆಬ್ದುನಿಯಾವನ್ನು ಓದಿ