ಗುಣಮಟ್ಟದ ಬೌಲರುಗಳನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳು ಶ್ರಮಪಡಬೇಕು: ತೆಂಡೂಲ್ಕರ್

ಗುರುವಾರ, 28 ಮೇ 2015 (20:11 IST)
ಗುಣಮಟ್ಟದ ವಿಶ್ವದರ್ಜೆ ಬೌಲರುಗಳನ್ನು ಎದುರಿಸಲು ಬ್ಯಾಟ್ಸ್‌ಮನ್ ಸದಾ ಶ್ರಮಪಡಬೇಕು. ತಮ್ಮ ಆಟದ ದಿನಗಳಲ್ಲಿ ಅದೇ ರೀತಿ ಮಾಡಿದ್ದಾಗಿ ತೆಂಡೂಲ್ಕರ್ ಹೇಳಿದರು. 
ಬ್ಯಾಟ್ಸ್‌ಮನ್ ತಮ್ಮ ಆಟವನ್ನು ಸುಧಾರಿಸಿಕೊಳ್ಳುವ ಬಗ್ಗೆ ಶ್ರಮಪಡಬೇಕು. ವಿಶ್ವದರ್ಜೆಯ ಬೌಲರುಗಳು ಸತತವಾಗಿ ಹೊಸದನ್ನು ಪ್ರಯೋಗಿಸುವುದರಿಂದ ಬ್ಯಾಟ್ಸ್‌ಮನ್‌ಗಳು ಶ್ರಮಪಟ್ಟು ಅಭ್ಯಾಸ ಮಾಡಬೇಕು ಎಂದು ಸಚಿನ್ ಗುರಗಾಂವ್ ಸೈಬರ್ ಹಬ್‌ನಲ್ಲಿ ಪ್ರಚಾರ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು. 
 
 ಲಸಿತಾ ಮಾಲಿಂಗಾ ಅವರ ಎಸೆತಗಳನ್ನು ದಿಟ್ಟವಾಗಿ ಎದುರಿಸಿದ ರಹಸ್ಯವೇನು ಎಂದು ಕೇಳಿದಾಗ, ತೆಂಡೂಲ್ಕರ್ ನಕ್ಕು,'' ಬಾಲ್ ನಹೀನ್, ಬಾಲ್ ಕೋ ದೇಖೋ'' ( ಅವರ ದಟ್ಟ ತಲೆಗೂದಲನ್ನು ನೋಡದೇ ಚೆಂಡಿನ ಕಡೆ ದೃಷ್ಟಿಹರಿಸುವುದು) ಎಂದು ಸಚಿನ್ ಹೇಳಿದರು.
 35ನೇ ಟೆಸ್ಟ್ ಶತಕದಲ್ಲಿ ಸುನಿಲ್ ಗವಾಸ್ಕರ್ ದಾಖಲೆ ಮುರಿದಿದ್ದು ಕೂಡ ತಮ್ಮ ಸ್ಮರಣೆಯಲ್ಲಿ ಅಚ್ಚಳಿಯದೇ ಉಳಿದಿದೆ ಎಂದು ಹೇಳಿದರು. 2005ರಲ್ಲಿ ನಾವು ಶ್ರೀಲಂಕಾ ವಿರುದ್ಧ ಆಡುವಾಗ ದೆಹಲಿ ಟೆಸ್ಟ್‌ಗೆ ಮುಂಚೆ ಮಧ್ಯಾಹ್ನ ನಿದ್ದೆಯ ಮಂಪರಿನಲ್ಲಿ ಬಿದ್ದ ಕನಸಿನಲ್ಲಿ ಕೋಟ್ಲಾದಲ್ಲಿ ಶತಕ ಬಾರಿಸಿದ ಕನಸು ನಿಜವಾಗಿದ್ದನ್ನು ತೆಂಡೂಲ್ಕರ್ ಸ್ಮರಿಸಿಕೊಂಡರು. ಬಳಿಕ ಆಡಲಿಳಿದಾಗ 35 ನೇ ಶತಕ ಬಾರಿಸಿದೆ ಎಂದು ಅವರು ಹೇಳಿದರು. 
 

ವೆಬ್ದುನಿಯಾವನ್ನು ಓದಿ