ಭಾರತ-ಲಂಕಾ ಟಿ20 ಪಿಚ್ ಅವಾಂತರ: ಕ್ಯುರೇಟರ್ ಗೆ ಬಿಸಿಸಿಐ ಬುಲಾವ್
ಮಂಗಳವಾರ, 7 ಜನವರಿ 2020 (10:56 IST)
ಮುಂಬೈ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ ಮಳೆ ಬಳಿಕ ಮೈದಾನ ಸಿಬ್ಬಂದಿಗಳು ಮೈದಾನ ನಿರ್ವಹಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಸರಿಯಾಗಿ ಕವರ್ ಹೊದಿಸದೇ ಪಿಚ್ ಒಣಗಿಸಲು ತಂತ್ರಜ್ಞಾನ ಬಳಸದೇ ಜಾಗತಿಕವಾಗಿ ಬಿಸಿಸಿಐ ಮುಜುಗರಕ್ಕೀಡಾಗಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ ಗುವಾಹಟಿ ಕ್ಯುರೇಟರ್ ಭೌಮಿಕ್ ಗೆ ಬುಲಾವ್ ನೀಡಿದೆ.
ಇದಕ್ಕೆಲ್ಲಾ ಕ್ಯುರೇಟರ್ ಮತ್ತು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವಗಣನೆಯೇ ಕಾರಣ ಎಂಬ ಆಕ್ರೋಶ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಕ್ಯುರೇಟರ್ ಬಳಿ ಘಟನೆಯ ವರದಿ ಕೇಳಿದೆ.