ಸೆಪ್ಟೆಂಬರ್‌ನಲ್ಲಿ ಮಿನಿ-ಐಪಿಎಲ್ ನಡೆಸಲು ಬಿಸಿಸಿಐ ಪರಿಶೀಲನೆ
ಮಂಗಳವಾರ, 24 ಮೇ 2016 (12:40 IST)
ಸೆಪ್ಟೆಂಬರ್ ತಿಂಗಳಲ್ಲಿ ಮಿನಿ ಐಪಿಎಲ್ ನಡೆಸುವ ಕುರಿತು ಬಿಸಿಸಿಐ ಪರಿಶೀಲನೆ ನಡೆಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಬಿಸಿಸಿಐ ಮಿನಿ-ಐಪಿಎಲ್ ನಡೆಸಲು ಇಷ್ಟಪಟ್ಟಿರುವ ನಡುವೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೂಡ ಚಾಂಪಿಯನ್ಸ್ ಲೀಗ್ ಪಂದ್ಯ ರದ್ದಾಗಿರುವುದರಿಂದ ಆ ಬಗ್ಗೆ ಗಮನಹರಿಸಿದೆ.
ವಿದೇಶದಲ್ಲಿ ಭಾರತೀಯ ಅಭಿಮಾನಿ ನೆಲೆಯನ್ನು ಮುಟ್ಟುವುದಕ್ಕೆ ಸಂಬಂಧಿಸಿದಂತೆ ಇದು ಮಹತ್ತರ ಪರೀಕ್ಷೆಯಾಗಿದೆ. ಅಮೆರಿಕದಂತ ಮಾರುಕಟ್ಟೆಯನ್ನು ಮಿನಿ-ಐಪಿಎಲ್‌ಗೆ ಶೋಧಿಸಿದರೆ ಇದು ವಿತ್ತೀಯವಾಗಿ ಕಾರ್ಯಸಾಧ್ಯವಾಗುತ್ತದೆ ಎಂದು ಈ ಬೆಳವಣಿಗೆಗೆ ಸಮೀಪವರ್ತಿ ಮೂಲಗಳು ತಿಳಿಸಿವೆ.
ಆ ಅವಧಿಯಲ್ಲಿ ಇನ್ನೊಂದು ಅಂತಾರಾಷ್ಟ್ರೀಯ ಪಂದ್ಯಾವಳಿ ಆಡಲು ಐಸಿಸಿ ಆಸಕ್ತವಾಗಿರುವ ನಡುವೆ, ಬಿಸಿಸಿಐ ಯೋಜನೆ ಫಲಪ್ರದವಾಗುವುದೇ ಕಾದು ನೋಡಬೇಕು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.