Rohit Sharma: ನಿವೃತ್ತಿಯಾಗಲು ರೋಹಿತ್ ಶರ್ಮಾಗೆ ಬಿಸಿಸಿಐನಿಂದಲೇ ಸೂಚನೆ

Krishnaveni K

ಬುಧವಾರ, 5 ಫೆಬ್ರವರಿ 2025 (15:47 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ನಿವೃತ್ತಿಯಾಗಲು ಈಗ ಬಿಸಿಸಿಐನಿಂದಲೇ ಸೂಚನೆ ಬಂದಿದೆ ಎನ್ನಲಾಗಿದೆ. ರೋಹಿತ್ ಗೆ ಬಿಸಿಸಿಐ ಡೆಡ್ ಲೈನ್ ಕೊಟ್ಟಿದೆ.

ರೋಹಿತ್ ಶರ್ಮಾ ಇತ್ತೀಚೆಗಿನ ದಿನಗಳಲ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ನಾಯಕನಾಗಿಯೂ ಮೊದಲಿನ ಚಾರ್ಮ್ ಇಲ್ಲ ಎಂಬ ಅಪವಾದಗಳಿವೆ. ಹೀಗಾಗಿ ಅವರ ನಿವೃತ್ತಿಗೆ ಒತ್ತಡ ಕೇಳಿಬಂದಿದೆ. ಇದೀಗ ಸ್ವತಃ ಬಿಸಿಸಿಐ ರೋಹಿತ್ ನಿವೃತ್ತಿಗೆ ಡೆಡ್ ಲೈನ್ ನೀಡಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಆದರೆ ಇದೇ ಅವರಿಗೆ ಕೊನೆಯ ಸರಣಿಯಾಗುವ ಸಾಧ್ಯತೆಯಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ನಿವೃತ್ತಿಯಾಗಲು ಬಿಸಿಸಿಐನಿಂದಲೇ ಸೂಚನೆ ಬಂದಿದೆ ಎನ್ನಲಾಗಿದೆ.

ಹೊಸ ನಾಯಕನನ್ನು ಬೆಳೆಸುವ ಉದ್ದೇಶದಿಂದ ರೋಹಿತ್ ದಾರಿ ಮಾಡಿಕೊಡಲು ಸೂಚನೆ ನೀಡಲಾಗಿದೆ. ಒಂದು ವೇಳೆ ರೋಹಿತ್ ಕನಿಷ್ಠ ಆಟಗಾರನಾಗಿಯಾದರೂ ತಂಡದಲ್ಲಿ ಮುಂದುವರಿಯಬೇಕಾದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಲೇಬೇಕು. ಬಳಿಕ ಐಪಿಎಲ್ ನಲ್ಲೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಅವರಿಗೆ ನಾಯಕರಾಗಿ ಅಲ್ಲದಿದ್ದರೂ ಕೇವಲ ಆಟಗಾರನಾಗಿಯಾದರೂ ತಂಡದಲ್ಲಿ ಮುಂದುವರಿಯಲು ಅವಕಾಶ ಸಿಗಲಿದೆ. ಆದರೆ ಇನ್ನೊಬ್ಬ ಹಿರಿಯ ಆಟಗಾರ ವಿರಾಟ್ ಕೊಹ್ಲಿಗೆ ಇನ್ನಷ್ಟು ಅವಕಾಶ ನೀಡಲು ನಿರ್ಧರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ