ಎನ್ ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ: ರಾಹುಲ್ ದ್ರಾವಿಡ್ ಗೆ ದೊಡ್ಡ ಹೊಣೆ?

ಬುಧವಾರ, 11 ಆಗಸ್ಟ್ 2021 (08:45 IST)
ಮುಂಬೈ: ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಹೊಸದಾಗಿ ಅರ್ಜಿ ಆಹ್ವಾನಿಸಿದೆ. ಇದರಿಂದಾಗಿ ಹಾಲಿ ಅಧ್ಯಕ್ಷ ರಾಹುಲ್ ದ್ರಾವಿಡ್ ರನ್ನು ಆ ಸ್ಥಾನದಿಂದ ತೆರವುಗೊಳಿಸಿ ದೊಡ್ಡ ಹೊಣೆ ನೀಡಲು ತಯಾರಿ ನಡೆದಿದೆ ಎನ್ನಲಾಗಿದೆ.


ಇತ್ತೀಚೆಗೆ ದ್ರಾವಿಡ್ ರನ್ನು ಟೀಂ ಇಂಡಿಯಾದ ಶ್ರೀಲಂಕಾ ಸರಣಿಗೆ ತಾತ್ಕಾಲಿಕವಾಗಿ ಕೋಚ್ ಆಗಿ ನೇಮಿಸಲಾಗಿತ್ತು. ಆ ವೇಳೆ ದ್ರಾವಿಡ್ ಟೀಂ ಇಂಡಿಯಾದ ಖಾಯಂ ಕೋಚ್ ಆಗಬೇಕೆಂದು ಕೂಗು ಜೋರಾಗಿತ್ತು.

ಇನ್ನೇನು ಖಾಯಂ ಕೋಚ್ ರವಿಶಾಸ್ತ್ರಿ ಗುತ್ತಿಗೆ ಅವಧಿ ಮುಗಿಯಲಿದ್ದು, ಅದಾದ ಬಳಿಕ ದ್ರಾವಿಡ್ ರನ್ನೇ ಆ ಸ್ಥಾನಕ್ಕೆ ನೇಮಿಸಲು ಈ ತಯಾರಿ ನಡೆದಿರಬಹುದು. ಅಥವಾ ಮುಂದಿನ ದಿನಗಳಲ್ಲಿ ಬಿಡುವಿಲ್ಲದ ಕ್ರಿಕೆಟ್ ಗಮನದಲ್ಲಿಟ್ಟುಕೊಂಡು ಎರಡು ತಂಡಗಳನ್ನು ಏಕಕಾಲಕ್ಕೆ ಆಡಿಸುವ ಯೋಚನೆ ಬಿಸಿಸಿಐಗಿದೆ. ಇಂತಹ ಸನ್ನಿವೇಶದಲ್ಲಿ ಒಂದು ತಂಡಕ್ಕೆ ದ್ರಾವಿಡ್ ರನ್ನೇ ಕೋಚ್ ಆಗಿ ಮಾಡುವ ಯೋಚನೆಯೂ ಬಿಸಿಸಿಐಗಿರಬಹುದು. ಹೀಗಾಗಿಯೇ ಎನ್ ಸಿಎಗೆ ಹೊಸ ಅಧ‍್ಯಕ್ಷನ ಹುಡುಕಾಟ ನಡೆದಿದೆ ಎನ್ನಲಾಗಿದೆ. 2019 ರಲ್ಲಿ ಎ ತಂಡದ ಕೋಚ್ ಆಗಿದ್ದ ದ್ರಾವಿಡ್ ಎನ್ ಸಿಎ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ