ಭಾರತ-ಬಾಂಗ್ಲಾ ಟೆಸ್ಟ್ ಪಂದ್ಯಕ್ಕೆ ಹೈದಾರಾಬಾದ್ ಮೈದಾನವಿಲ್ಲದಿದ್ದರೆ ಕೋಲ್ಕೊತ್ತಾದಲ್ಲಿ ನಡೆಸಲು ಬಿಸಿಸಿಐ ಚಿಂತನೆ

ಸೋಮವಾರ, 9 ಜನವರಿ 2017 (11:14 IST)
ಮುಂಬೈ: ಲೋಧಾ ಸಮಿತಿ ವರದಿಯಿಂದ ಹಣ ಬಿಡುಗಡೆ ಮಾಡಲು ಬಿಸಿಸಿಐಗೆ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಪಂದ್ಯ ಆಯೋಜಿಸಲು ಹಣವಿಲ್ಲ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ನೆಪವೊಡ್ಡಿದೆ. ಹೀಗಾಗಿ ಬಿಸಿಸಿಐ ಕೋಲ್ಕೊತ್ತಾ ಮೈದಾನವನ್ನು ಎರಡನೇ ಆಯ್ಕೆಯಾಗಿ ತೆರೆದಿಟ್ಟುಕೊಂಡಿದೆ.

ದೆಹಲಿ ಕ್ರಿಕೆಟ್ ಸಂಸ್ಥೆಯಂತೆ ಹೈದರಾಬಾದ್ ಕೂಡಾ ಹಣಕಾಸು ಸಂಕಷ್ಟ ಎದುರಿಸುತ್ತಿದೆ. ಆದರೆ ಲೋಧಾ ಸಮಿತಿ ವರದಿಯಿಂದ ಬಿಸಿಸಿಐಗೆ ಮೊದಲಿನಂತೆ ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ನೆಪವೊಡ್ಡಿ ಹೈದರಾಬಾದ್ ಪಂದ್ಯ ಆಯೋಜಿಸುವುದು ಕಷ್ಟವೆನ್ನುತ್ತಿದೆ ಎಂದು  ವರದಿಯಾಗಿದೆ.

ಆದರೆ ಈ ವರದಿಗಳನ್ನು ಹೈದರಾಬಾದ್ ನಿರಾಕರಿಸಿದೆ. ಈಗಾಗಲೇ ಟೆಸ್ಟ್ ಪಂದ್ಯ ಆಯೋಜಿಸಲು ತಯಾರಿ ಆರಂಭಿಸಲಾಗಿದ್ದು ಸದ್ಯದಲ್ಲೇ ಕ್ಯುರೇಟರ್ ಗಳು ಪಿಚ್ ನಿರ್ಮಾಣದ ತಯಾರಿ ತೊಡಗಿಸಲಿದ್ದಾರೆ ಎಂದಿದೆ. ಆದರೆ ಬಿಸಿಸಿಐ ಎರಡನೇ ಆಯ್ಕೆಯಾಗಿ ಕೋಲ್ಕೊತ್ತಾ ಕ್ರೀಡಾಂಗಣವನ್ನು ತೆರೆದಿಟ್ಟಿದ್ದು, ಇದು ಬಾಂಗ್ಲಾದೇಶದವರಿಗೆ ಪ್ರಿಯವಾದ ಮೈದಾನವೆನ್ನಲಾಗಿದೆ. ಅಂತೂ ಅಲ್ಲಿ ಆಗದಿದ್ದರೆ, ಇಲ್ಲಾದರೂ, ಪಂದ್ಯ ಆಯೋಜಿಸಬೇಕೆನ್ನುವ ಯೋಜನೆ ಬಿಸಿಸಿಐಯದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ