ಬಿಸಿಸಿಐನಿಂದ ಕೊಚ್ಚಿ ಟಸ್ಕರ್ಸ್ ಜೊತೆ ಕೋರ್ಟ್ ಹೊರಗಿನ ಇತ್ಯರ್ಥ ಸಾಧ್ಯತೆ

ಶುಕ್ರವಾರ, 24 ಜುಲೈ 2015 (13:42 IST)
ಬಿಸಿಸಿಐ ಕೊಚ್ಚಿ ಕ್ರಿಕೆಟ್ ಸಂಸ್ಥೆಗೆ ಸಂಭವನೀಯ 900 ಕೋಟಿ ಪಾವತಿ ಮಾಡುವುದನ್ನು ತಪ್ಪಿಸಲು ಕೋರ್ಟ್ ಹೊರಗಿನ ಇತ್ಯರ್ಥಕ್ಕೆ ಬರುವ ಸಾಧ್ಯತೆಯಿದೆ. 2011ರ ಸೆಪ್ಟೆಂಬರ್‌ನಲ್ಲಿ ಕೊಚ್ಚಿ ಇಂಡಿಯನ್ ಪ್ರೀಮಿಯರ್ ಲೀಗ್ ರದ್ದು ಮಾಡಿದ ನಂತರ ಎರಡು ಕಡೆ ನಡುವೆ ಪಂಚಾಯಿತಿ ತೀರ್ಪನ್ನು ಆಧರಿಸಿ ಕೊಚ್ಚಿ ಫ್ರಾಂಚೈಸಿಗೆ 384.83 ಕೋಟಿ ರೂ. ಜೊತೆಗೆ  ನಾಲ್ಕು ವರ್ಷಗಳಿಗೆ 18% ವಾರ್ಷಿಕ ಬಡ್ಡಿ ನೀಡಬೇಕಾಗಿದೆ.

 ರೆಂಡೆಜ್‌ವಸ್ ಸ್ಫೋರ್ಟ್ಸ್ ವರ್ಲ್ಡ್‌ಗೆ 153 ಕೋಟಿ ಬ್ಯಾಂಕ್ ಖಾತರಿ ಮತ್ತು ಕಾನೂನು ಶುಲ್ಕವಾಗಿ ಹೆಚ್ಚುವರಿ 72 ಲಕ್ಷ ರೂ. ನೀಡಬೇಕೆಂದು ಮಾಜಿ ಮುಖ್ಯನ್ಯಾಯಮೂರ್ತಿ ಆರ್. ಸಿ. ಲಾಹೋಟಿ ತೀರ್ಪು ನೀಡಿದ್ದರು.

ತುಂಬಬೇಕಾದ ಹಾನಿ ನಾಲ್ಕುವರ್ಷಗಳಿಗೆ ಚಕ್ರಬಡ್ಡಿಯಾಗಿದ್ದರೆ, ಬಿಸಿಸಿಐ ಕೊಚ್ಚಿಗೆ 900 ಕೋಟಿ ರೂ. ಪಾವತಿ ಮಾಡಬೇಕಾಗುತ್ತದೆ. ಬಿಸಿಸಿಐಗೆ ಇದಕ್ಕೆ ಉತ್ತರಿಸಲು ಸೆಪ್ಟೆಂಬರ್ 22ರವರೆಗೆ ಕಾಲಾವಕಾಶ ಇದ್ದರೂ, ಈ ತೀರ್ಪನ್ನು ಎದುರಿಸುವುದು ಹೇಗೆಂಬ ಅನಿಶ್ಚಿತತೆ ಬಿಸಿಸಿಐಗೆ ಆವರಿಸಿದೆ. ಬಿಸಿಸಿಐ ತೀವ್ರ ತೊಂದರೆಯಲ್ಲಿದೆ. ಇದನ್ನು ಕೋರ್ಟ್ ಹೊರಗೆ ಇತ್ಯರ್ಥ ಮಾಡುವುದೇ ಮುಂದಿನ ದಾರಿ ಎಂದು ಮಂಡಳಿ ಹಿರಿಯ ಅಧಿಕಾರಿ ತಿಳಿಸಿದರು.  ಇನ್ನೊಬ್ಬರು ಅಧಿಕಾರಿ ಒಪ್ಪಂದ ವ್ಯಾಪ್ತಿಯ ಹೊರಗೆ ತೀರ್ಪುದಾರರು ಹೋಗಿದ್ದರಿಂದ ಬಿಸಿಸಿಐ ಈ ತೀರ್ಪನ್ನು ಪ್ರಶ್ನಿಸಲಿದೆ ಎಂದು ಹೇಳಿದರು. 
 
ಇನ್ನೊಬ್ಬರು ಅಧಿಕಾರಿ ,  ಬಿಸಿಸಿಐಗೆ ಉತ್ತಮ ಮಾರ್ಗವೇನೆಂದರೆ ಕೊಚ್ಚಿಗೆ ಐಪಿಎಲ್‌ನಲ್ಲಿ ಮತ್ತೆ ಆಡಲು ಅವಕಾಶ ನೀಡುವುದು. ಅದರ ವಾಪಸಾತಿಯಿಂದ  ಬಿಸಿಸಿಐ ನಗದಿನ ಹೊರಹರಿವನ್ನು ತಡೆಯಬಹುದು. ಪಾವತಿಗಳನ್ನು ವಾರ್ಷಿಕ ಫ್ರಾಂಚೈಸಿ ಶುಲ್ಕಕ್ಕೆ ಹೊಂದಾಣಿಕೆ ಮಾಡಬಹುದು ಎಂದಿದ್ದಾರೆ. 
 
 

ವೆಬ್ದುನಿಯಾವನ್ನು ಓದಿ