ಬಿಸಿಸಿಐ ಎಡವಟ್ಟು ಧೋನಿ-ವಿರಾಟ್ ಕೊಹ್ಲಿ ಅಭಿಮಾನಿಗಳ ತಮಾಷೆಗೆ ಕಾರಣವಾಯ್ತು

ಶನಿವಾರ, 21 ಜುಲೈ 2018 (10:41 IST)
ಮುಂಬೈ: ಟೀಂ ಇಂಡಿಯಾ ಆಟಗಾರರ ವೈಯಕ್ತಿಕ ವಿವರಗಳನ್ನು ತನ್ನ ವೆಬ್ ಸೈಟ್ ನಲ್ಲಿ ನೀಡುವಾಗ ಬಿಸಿಸಿಐ ಮಾಡಿದ ಎಡವಟ್ಟು ಇದೀಗ ವಿರಾಟ್ ಕೊಹ್ಲಿ-ಧೋನಿ ಅಭಿಮಾನಿಗಳ ಲೇವಡಿಗೆ ಕಾರಣವಾಗಿದೆ.
 

ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಧೋನಿಯ ಹೆಸರಿನ ಜತೆಗೆ ಕ್ಯಾಪ್ಟನ್ ಆಫ್ ಇಂಡಿಯಾ ಎಂದು ಬರೆದಿತ್ತು. ಅಸಲಿಗೆ ಧೋನಿ ನಾಯಕತ್ವ ತ್ಯಜಿಸಿ ಎರಡು ವರ್ಷವೇ ಆಗಿದೆ. ಹೀಗಿದ್ದರೂ ಬಿಸಿಸಿಐ ಕೊಹ್ಲಿ ಬದಲು ಧೋನಿ ಹೆಸರಿನ ಜತೆಗೆ ನಾಯಕ ಎಂದು ಬರೆದಿದ್ದು ಹಾಸ್ಯಾಸ್ಪದವಾಯಿತು.

ಇದನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ, ಕೊಹ್ಲಿ ಅಭಿಮಾನಿಗಳು ಬಿಸಿಸಿಐಯನ್ನು ಟ್ರೋಲ್ ಮಾಡುತ್ತಿದ್ದಾರೆ. ಬಿಸಿಸಿಐ ಇನ್ನೂ ಧೋನಿಯನ್ನೇ ನಾಯಕ ಎಂದುಕೊಂಡಂತಿದೆ. ಬಹುಶಃ ಧೋನಿ ಪರ್ಮನೆಂಟ್ ನಾಯಕ, ಉಳಿದವರೆಲ್ಲರೂ ತಾತ್ಕಾಲಿಕ ನಾಯಕರು ಎಂದು ಇದರ ಅರ್ಥ ಇರಬಹುದು ಎಂದು ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಇದರ ಅರ್ಥ ಬಿಸಿಸಿಐಗೆ ಈಗಲೂ ಧೋನಿಯೇ ನಾಯಕತ್ವ ವಹಿಸಬೇಕೆಂದು ಆಸೆಯಾಗಿರಬಹುದು ಎಂದು ಕಾಲೆಳೆದಿದ್ದಾರೆ. ಅಂತೂ ಬಿಸಿಸಿಐ ಮಾಡಿದ ಎಡವಟ್ಟೊಂದು ಟ್ರೋಲ್ ಗೊಳಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ