ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್
ಕೇರಳ ಕ್ರಿಕೆಟ್ ಲೀಗ್ ನಲ್ಲಿ ಕೊಚ್ಚಿ ತಂಡದ ಪರ ಆಡುವ ಸಂಜು ಸ್ಯಾಮ್ಸನ್ ನಿನ್ನೆ 42 ಬಾಲ್ ಗಳಿಂದ ಶತಕ ಸಿಡಿಸಿ ತಮ್ಮ ತಂಡದ ಗೆಲುವಿನ ರೂವಾರಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಹೊಡೆದ ಈ ಶತಕ ಸಾಕಷ್ಟು ಪ್ರಶ್ನೆಗಳಿಗೆ ಉತ್ತರವಾಯಿತು.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಜೊತೆಗೆ ಶುಭಮನ್ ಗಿಲ್ ರನ್ನೂ ಆಯ್ಕೆ ಮಾಡಲಾಗಿದೆ. ಗಿಲ್ ಇರುವ ಕಾರಣ ಸಂಜುಗೆ ಆಡುವ ಬಳಗದಲ್ಲಿ ಸ್ಥಾನ ಸಿಗದು ಎಂದೇ ಹೇಳಲಾಗುತ್ತಿದೆ. ಇದುವರೆಗೆ ಟಿ20 ಸರಣಿಗಳಲ್ಲಿ ಅಭಿಷೇಕ್ ಶರ್ಮಾ ಜೊತೆ ಸಂಜು ಓಪನರ್ ಆಗಿ ಆಡುತ್ತಿದ್ದರು. ಆದರೆ ಗಿಲ್ ಆಯ್ಕೆಯಿಂದ ಅವರ ಸ್ಥಾನಕ್ಕೆ ಕುತ್ತು ಬಂದಿದೆ.
ಈ ನಡುವೆ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಶತಕದ ಮೂಲಕ ಟೀಂ ಇಂಡಿಯಾ ಆಡುವ ಬಳಗದಿಂದ ತಮ್ಮನ್ನು ಹೊರಗಿಡುವ ಮೊದಲು ಯೋಚಿಸುವಂತೆ ಮಾಡಿದ್ದಾರೆ.