ರಾಹುಲ್ ದ್ರಾವಿಡ್ ಗೆ ಮತ್ತೊಂದು ಹೊಣೆ ಹೊರಿಸಲು ಬಿಸಿಸಿಐ ರೆಡಿ!
ಸೋಮವಾರ, 25 ಮಾರ್ಚ್ 2019 (09:05 IST)
ಮುಂಬೈ: ಭಾರತ ಅಂಡರ್19 ತಂಡದ ಕೋಚ್ ಆಗಿ ಈಗಾಗಲೇ ಟೀಂ ಇಂಡಿಯಾಕ್ಕೆ ಹಲವು ಪ್ರತಿಭಾವಂತರನ್ನು ತಯಾರು ಮಾಡಿದ ಖ್ಯಾತಿ ಹೊಂದಿರುವ ‘ವಾಲ್’ ರಾಹುಲ್ ದ್ರಾವಿಡ್ ಗೆ ಇದೀಗ ಮತ್ತೊಂದು ಜವಾಬ್ಧಾರಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ರನ್ನು ನೇಮಕ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ.
ಇಲ್ಲಿ ಹಲವು ಯುವ ಪ್ರತಿಭೆಗಳಿಗೆ ತರಬೇತಿ ನೀಡಲಾಗುತ್ತದೆ ಮತ್ತು ಗಾಯಗೊಂಡ ಕ್ರಿಕೆಟಿಗರು ಮರಳಿ ಫಾರ್ಮ್ ಗೆ ಮರಳಲು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಕ್ಕೂ ಮೊದಲು ಎನ್ ಸಿಎ ಬ್ಯಾಟಿಂಗ್ ಕೋಚ್ ಆಗಿ ಡಬ್ಯುವಿ ರಮಣ್ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಅವರೀಗ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿದ್ದಾರೆ.
ಇದೀಗ ಎನ್ ಸಿಎಯಲ್ಲಿ ಕೋಚಿಂಗ್ ನೀಡುತ್ತಿರುವುದು ಬೌಲಿಂಗ್ ಕೋಚ್ ನರೇಂದ್ರ ಹಿರ್ವಾನಿ ಮಾತ್ರ. ಹೀಗಾಗಿ ಬ್ಯಾಟಿಂಗ್ ಗೂ ಕೋಚಿಂಗ್ ಸಿಗಲು ದ್ರಾವಿಡ್ ರನ್ನೇ ನೇಮಿಸಲು ಚಿಂತನೆ ನಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ