ರಾಹುಲ್ ದ್ರಾವಿಡ್ ಪ್ರೇರಣೆಯಿಂದ ಈ ಕೆಲಸಕ್ಕೆ ಮುಂದಾದ ಪಾಕ್ ಕ್ರಿಕೆಟ್ ಮಂಡಳಿ

ಸೋಮವಾರ, 18 ಮಾರ್ಚ್ 2019 (09:50 IST)
ನವದೆಹಲಿ: ಭಾರತದ ಅಂಡರ್ 19 ತಂಡದ ಕೋಚ್ ಆಗಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಯಶಸ್ಸು ಕಂಡಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ಪ್ರೇರಣೆಯಾಗಿದೆ.


ದ್ರಾವಿಡ್ ರಂತೇ ಪಾಕ್ ಕೂಡಾ ತನ್ನ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ರನ್ನು ಅಂಡರ್ 19 ತಂಡಕ್ಕೆ ಕೋಚ್ ಆಗಿ ನೇಮಿಸಲು ನಿರ್ಧರಿಸಿದೆ. ಎಳೆಯ ಕ್ರಿಕೆಟಿಗರಿಗೆ ಸೂಕ್ತ ಮಾರ್ಗದರ್ಶನ ನೀಡಿ ಟೀಂ ಇಂಡಿಯಾಕ್ಕೆ ಪ್ರತಿಭಾವಂತ ಕ್ರಿಕೆಟಿಗರನ್ನು ಒದಗಿಸುವಲ್ಲಿ ದ್ರಾವಿಡ್‍ ಪಾತ್ರ ಮಹತ್ವದ್ದಾಗಿದೆ.

ಇದೇ ರೀತಿ ಪಾಕಿಸ್ತಾನ ಕೂಡಾ ತನ್ನ ಎಳೆಯ ಕ್ರಿಕೆಟಿಗರಿಗೆ ದ್ರಾವಿಡ್ ರಂತೆ ಹಿರಿಯ ಆಟಗಾರರಿಂದ ತರಬೇತಿ ಕೊಡಿಸಿ ಉತ್ತಮ ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ತಯಾರು ಮಾಡಲು ಪಾಕ್ ಕ್ರಿಕೆಟ್ ಮಂಡಳಿ ಯೂನಿಸ್ ಖಾನ್ ರನ್ನು ನೇಮಿಸಲು ಮುಂದಾಗಿದೆ. ಕೆಲವು ದಿನಗಳ ಹಿಂದಷ್ಟೇ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹ್ಸಾನ್ ಮಣಿ ದ್ರಾವಿಡ್ ರಂತೇ ಪಾಕ್ ಹಿರಿಯ ಆಟಗಾರರೂ ಎಳೆಯ ಕ್ರಿಕೆಟಿಗರಿಗೆ ತರಬೇತಿ ನೀಡಲು ಮುಂದಾಗಬೇಕು ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ