ಅಫಿಡವಿಟ್ ಸಲ್ಲಿಸಿದ ಬಿಸಿಸಿಐ

ಗುರುವಾರ, 27 ಅಕ್ಟೋಬರ್ 2016 (10:03 IST)
ನವದೆಹಲಿ:  ಲೋಧಾ ಸಮಿತಯ ವರದಿಯನ್ನು ಆಧಿರಿಸಿ ಡಿಸೆಂಬರ್ 3 ರ ಒಳಗೆ ಬಿಸಿಸಿಐ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿದೆ.

ಇದುವರೆಗೆ 12 ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಬಿಸಿಸಿಐನಿಂದ ಪಡೆದ ನಿಧಿಯ ಮೊತ್ತವನ್ನು ವರ್ಗಾವಣೆ ಮಾಡಿದೆ.  ಆ ಮೊತ್ತವನ್ನು ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೂ ಯಾವುದಕ್ಕೂ ಬಳಸುವುದಿಲ್ಲ ಎಂದು ಬಿಸಿಸಿಐ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದೆ.

ಆಂಧ್ರ ಪ್ರದೇಶ, ಹರ್ಯಾಣ, ಕರ್ನಾಟಕ,ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮುಂಬೈ, ಪಂಜಾಬ್, ಸೌರಾಷ್ಟ್ರ, ತಮಿಳು ನಾಡು ಮತ್ತು ಉತ್ತರ ಪ್ರದೇಶ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐಗೆ ದಾಖಲೆ ಒದಗಿಸುವ ಪತ್ರ ನೀಡಿದ್ದು, 16 ರಿಂದ 19 ಕೋಟಿ ಹಣ ಪ್ರತ್ಯೇಕವಾಗಿ ಇರಿಸಿದ್ದೇವೆ ಎಂದಿದ್ದಾರೆ.  ಬಿಸಿಸಿಐ ಕಾರ್ಯದರ್ಶಿ ರತ್ನಾಕರ್ ಶೆಟ್ಟಿ ಸಹಿ ಮಾಡಿದ ಅಫಿಡವಿಟ್ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ