ಲೋಧಾ ಸಮಿತಿಗೆ ಬಿಸಿಸಿಐ ಅನುಪಾಲನಾ ವರದಿ ಸಲ್ಲಿಕೆ

ಶುಕ್ರವಾರ, 26 ಆಗಸ್ಟ್ 2016 (10:47 IST)
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಸುಧಾರಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ  ಸುಪ್ರೀಂಕೋರ್ಟ್ ನೇಮಿತ ನ್ಯಾಯಮೂರ್ತಿ ಆರ್‌ಎಂ ಲೋಧಾ ಸಮಿತಿಗೆ ಬಿಸಿಸಿಐ ಗುರುವಾರ ಮೊದಲ ಅನುಪಾಲನಾ ವರದಿಯನ್ನು ಸಲ್ಲಿಸಿದೆ.

ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಇಂದು ತಡ ಸಂಜೆಯಲ್ಲಿ ಪಾಲನಾ ವರದಿಯನ್ನು ಸಲ್ಲಿಸಿದರು ಎಂದು ಸಮಿತಿಗೆ ಸಮೀಪವರ್ತಿ ಮೂಲಗಳು ಹೇಳಿವೆ.
 
 ಎಲ್ಲಾ ಅನರ್ಹ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಸದಸ್ಯರಿಗೆ ಅದನ್ನು ಸದ್ಯದಲ್ಲೇ ಹಂಚುವುದಾಗಿ ಅವರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. 
 
ಸಮಿತಿಯು ಆಗಸ್ಟ್ 28ರಂದು ಭೇಟಿ ಮಾಡಿದಾಗ ಅನುಪಾಲನಾ ವರದಿಯನ್ನು ಚರ್ಚೆಗೆ ಎತ್ತಿಕೊಳ್ಳುವ ಸಂಭವವಿದೆ.  ಅಕ್ಟೋಬರ್ 15ರೊಳಗೆ 11 ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಸಮಿತಿ ಬಯಸಿದೆ. ಬಿಸಿಸಿಐ ಈಗಾಗಲೇ ಸುಪ್ರೀಂಕೋರ್ಟ್‌ಗೆ ಪುನರ್ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಸಿಜೆಐ ಟಿಎಸ್ ಠಾಕುರ್ ಅವರನ್ನು ಈ ಪ್ರಕರಣದಿಂದ ಅನರ್ಹಗೊಳಿಸಬೇಕೆಂದು ಮನವಿ ಮಾಡಿದೆ.  ಈ ಕ್ಷಣದಲ್ಲಿ , ಪುನರ್ಪರಿಶೀಲನಾ ಅರ್ಜಿಯ ತೀರ್ಪು ಬರುವತನಕ ಯಾವುದೇ ರಾಜ್ಯ ಸಂಸ್ಥೆಗಳು ಸುಧಾರಣೆ ಕೈಗೊಳ್ಳುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ