ಬಿಸಿಸಿಐ ಟೀಂ ಡೈರೆಕ್ಟರ್ ಹೆಸರು ಜೂನ್ 6ರೊಳಗೆ ಪ್ರಕಟ: ಠಾಕೂರ್

ಮಂಗಳವಾರ, 26 ಮೇ 2015 (11:00 IST)
ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ನಿವಾಸದಲ್ಲಿ ರಹಸ್ಯ ಸಭೆ ಬಳಿಕ, ಜೂನ್ 6ರೊಳಗೆ ಟೀಂ ಡೈರೆಕ್ಟರ್ ಸೇರಿದಂತೆ  ರಾಷ್ಟ್ರೀಯ ತಂಡದ ಬೆಂಬಲದ ಸಿಬ್ಬಂದಿಯ ಹೆಸರನ್ನು ಬಾಂಗ್ಲಾದೇಶ ಪ್ರವಾಸಕ್ಕೆ ಒಂದು ದಿನ ಮುಂಚಿತವಾಗಿ ಪ್ರಕಟಿಸುವುದಾಗಿ ಕಾರ್ಯದರ್ಶಿ ಅನುರಾಗ್ ಠಾಕುರ್  ತಿಳಿಸಿದ್ದಾರೆ. 
 
ಟೀಂ ಇಂಡಿಯಾ ಜೂನ್ 5ರಂದು ಇಲ್ಲಿಗೆ ಬರುತ್ತದೆ. ಮರುದಿನ ಫಿಟ್ನೆಸ್ ಪರೀಕ್ಷೆ ಇರುತ್ತದೆ. ಜೂನ್ 7ರಂದು ತಂಡವು ಬಾಂಗ್ಲಾದೇಶಕ್ಕೆ ನಿರ್ಗಮಿಸುತ್ತದೆ. ಅದಕ್ಕೆ ಮುಂಚಿತವಾಗಿ ಟೀಂ ಡೈರೆಕ್ಟರ್ ಮತ್ತು ಬೆಂಬಲ ಸಿಬ್ಬಂದಿಯ ಹೆಸರನ್ನು ಪ್ರಕಟಿಸುವುದಾಗಿ  ಬಿಸಿಸಿಐ ಅಧ್ಯಕ್ಷರ ನಿವಾಸದಿಂದ ಹೊರಬಂದ ಠಾಕುರ್ ತಮಗಾಗಿ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. 
 
ಐಪಿಎಲ್ 8ನೇ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ದಾಲ್ಮಿಯಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಇಲ್ಲಿಗೆ ಬಂದಿರುವುದಾಗಿ ಠಾಕುರ್ ಹೇಳಿದರು. ಐಪಿಎಲ್ ಚೇರ್‌ಮನ್ ರಾಜೀವ್ ಶುಕ್ಲಾ ಕೂಡ ದಾಲ್ಮಿಯಾ ನಿವಾಸಕ್ಕೆ ಠಾಕೂರ್ ಜೊತೆಗೂಡಿದ್ದರು. 

ವೆಬ್ದುನಿಯಾವನ್ನು ಓದಿ