ರಣಜಿ ಟ್ರೋಫಿಗೆ ತಟಸ್ಥ ಮೈದಾನಗಳಿಗೆ ಬಿಸಿಸಿಐ ತಾಂತ್ರಿಕ ಸಮಿತಿ ಶಿಫಾರಸು

ಸೋಮವಾರ, 30 ಮೇ 2016 (17:22 IST)
ಬಿಸಿಸಿಐ ತಾಂತ್ರಿಕ ಸಮಿತಿಯು 2016-17ನೇ ಸಾಲಿನ ರಣಜಿ ಟ್ರೋಫಿ ಪಂದ್ಯಗಳನ್ನು ತಟಸ್ಥ ಮೈದಾನಗಳಲ್ಲಿ ಆಡಿಸುವ ಮೂಲಕ ಪಂದ್ಯವನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿ ಮಾಡುವಂತೆ ಶಿಫಾರಸು ಮಾಡಿದೆ. ತವರು ತಂಡಗಳಿಗೆ ನಿರ್ದಿಷ್ಟ ಪಿಚ್ ಸಿದ್ಧಪಡಿಸುವುದನ್ನು ತಪ್ಪಿಸಲು ಮತ್ತು ವಿವಿಧ ಪರಿಸ್ಥಿತಿಗಳಲ್ಲಿ ಆಟಗಾರರನ್ನು ಆಟಕ್ಕೆ ಒಡ್ಡುವುದಾಗಿದೆ. ಮಂಡಳಿಯ ಕಾರ್ಯಕಾರಿ ಸಮಿತಿ ಇದನ್ನು ಅಂಗೀಕರಿಸಬೇಕಾಗಿದೆ. ಇದೇ ರೀತಿಯ ಶಿಫಾಸರನ್ನು 2012-13ರ ಸೀಸನ್‌ನಲ್ಲಿ ಮಾಡಲಾಗಿತ್ತು. ಆದರೆ ಬಳಿಕ ಅದನ್ನು ತಳ್ಳಿಹಾಕಲಾಗಿತ್ತು. 
 
ಕಳೆದ ಸೀಸನ್ ರಣಜಿ ಟ್ರೋಫಿಯಲ್ಲಿ ಕೇವಲ 2 ದಿನಗಳಲ್ಲಿ 9 ಪಂದ್ಯಗಳು ಮುಗಿದಾಗ ರಣಜಿ ಟ್ರೋಫಿಯಲ್ಲಿ ಬಳಸುವ ಪಿಚ್‌ಗಳ ಪರಿಶೀಲನೆ ನಡೆಸಲಾಯಿತು. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕಳಪೆ ಪಿಚ್‌ಗಳನ್ನು ಟೀಕಿಸಿ ಇವು ಯುವ ಕ್ರಿಕೆಟಿಗರ ಪ್ರತಿಭೆಯನ್ನು ಮೊಟಕು ಮಾಡುತ್ತದೆಂದು ಆಪಾದಿಸಿದ್ದರು.  

ರಾಜ್ಯ ಕ್ರಿಕೆಟ್ ಸಂಸ್ಥೆಗಳು ಒಳ್ಳೆಯ ಮೈದಾನಗಳನ್ನು ಸಿದ್ಧಪಡಿಸಬೇಕೆಂದು ಅವರು ಸಲಹೆ ಮಾಡಿದ್ದರು.  ಕರ್ನಾಟಕ ಕೋಚ್ ಜೆ. ಅರುಣ್ ಕುಮಾರ್ ಸಮಿತಿಯ ಶಿಫಾರಸನ್ನು ಸ್ವಾಗತಿಸಿದ್ದಾರೆ. ಆದರೆ ಅಸ್ಸಾಂ ಕೋಚ್ ಸನತ್ ಕುಮಾರ್ ಅಸಮ್ಮತಿ ಸೂಚಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ