ಧೋನಿಗೆ ಥ್ಯಾಂಕ್ಯೂ ಹೇಳಿದ ಬಿಸಿಸಿಐ

ಗುರುವಾರ, 29 ಅಕ್ಟೋಬರ್ 2020 (10:29 IST)
ಮುಂಬೈ: ಧೋನಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಬಳಿಕ ಟೀಂ ಇಂಡಿಯಾ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಡುತ್ತಿದೆ. ಹೀಗಾಗಿ ಬಿಸಿಸಿಐ ಧೋನಿಗೆ ಅಧಿಕೃತವಾಗಿ ಥ್ಯಾಂಕ್ಯೂ ಹೇಳಿದೆ.


ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಧೋನಿಯ ಭಾವಚಿತ್ರ ಹಾಕಿ ‘ಥ್ಯಾಂಕ್ಯೂ ಧೋನಿ’ ಎಂದು ಬರೆದುಕೊಂಡಿದೆ. ಈ ಮೂಲಕ ಭಾರತ ತಂಡಕ್ಕೆ ಯಶಸ್ಸು ತಂದುಕೊಟ್ಟ ನಾಯಕನಿಗೆ ಗೌರವ ಸಲ್ಲಿಸಿದೆ. ಟೀಂ ಇಂಡಿಯಾ ಐಪಿಎಲ್ ಮುಗಿದ ಬಳಿಕ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯನ್ನಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ