ನವದೆಹಲಿ: ಉತ್ತರಾಖಂಡದಿಂದ ದೆಹಲಿಗೆ ತೆರಳುತ್ತಿದ್ದಾಗ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ತೀವ್ರ ಗಾಯಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ.
ರಿಷಬ್ ಪಂತ್ ಹಣೆಗೆ ಎರಡು ಗಾಯಗಳಾಗಿದ್ದು, ಬಲ ಕಾಲು, ಪಾದ, ಬೆನ್ನಿಗೆ ಗಾಯವಾಗಿದೆ. ಅವರಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಸಿಸಿಐ ಪ್ರಕಟಣೆ ನೀಡಿದೆ.
ಇನ್ನು, ರಿಷಬ್ ಗೆ ಅಪಘಾತವಾದ ಸುದ್ದಿ ತಿಳಿದ ತಕ್ಷಣವೇ ಬಿಸಿಸಿಐ, ಉತ್ತರಾಖಂಡ ಸರ್ಕಾರ ಸ್ಪಂದಿಸಿದ್ದು ಎಲ್ಲಾ ರೀತಿಯ ನೆರವು ನೀಡಲು ಮುಂದಾಗಿದೆ. ರಿಷಬ್ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲೂ ಉತ್ತರಾಖಂಡ ಸಿಎಂ ಸೂಚಿಸಿದ್ದರು. ಇನ್ನು, ಬಿಸಿಸಿಐ ರಿಷಬ್ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸಲು ಮುಂದಾಗಿದೆ. ಈ ನಡುವೆ ಕ್ರಿಕೆಟ್, ಸಿನಿಮಾ, ರಾಜಕೀಯ ಗಣ್ಯರು, ಅಭಿಮಾನಿಗಳು ರಿಷಬ್ ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.