ಎಲ್ಲಾ ದೇವರೇ ನೋಡಿಕೊಳ್ತಾನೆ: ತಂಡದಿಂದ ಕೈ ಬಿಟ್ಟ ಬಳಿಕ ಶಿಖರ್ ಧವನ್ ಹೇಳಿಕೆ
ತಂಡದ ಹಿರಿಯ ಆರಂಭಿಕ ಶಿಖರ್ ಧವನ್ ಗೆ ಹಲವು ಅವಕಾಶ ನೀಡಿದ್ದರೂ ಇತ್ತೀಚೆಗಿನ ದಿನಗಳಲ್ಲಿ ರನ್ ಗಳಿಸಿರಲಿಲ್ಲ. ಹೀಗಾಗಿ ಅವರನ್ನು ಈ ಸರಣಿಗೆ ಕೈ ಬಿಡಲಾಗಿದೆ.
ಇದರ ಬೆನ್ನಲ್ಲೇ ಧವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೋ ಪ್ರಕಟಿಸಿ, ಶ್ರಮಪಡುವುದು ನಮ್ಮ ಕರ್ತವ್ಯ. ಉಳಿದಿದ್ದನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದು ಬರೆದುಕೊಂಡಿದ್ದಾರೆ.