ಟಿ20 ವಿಶ್ವಕಪ್ ಗೆ ನೀವು ಬೇಡ! ಕೊಹ್ಲಿ ಜೊತೆ ಚರ್ಚಿಸಲಿರುವ ಬಿಸಿಸಿಐ
ಶುಕ್ರವಾರ, 8 ಡಿಸೆಂಬರ್ 2023 (12:10 IST)
ಮುಂಬೈ: 2024 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಈಗಿಂದಲೇ ಬಿಸಿಸಿಐ ತಂಡ ಕಟ್ಟಲು ಆರಂಭಿಸಿದೆ. ಇದೀಗ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಈಗಾಗಲೇ ಬಿಸಿಸಿಐ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿತ್ತು. ದ್ರಾವಿಡ್ ರನ್ನು ಕೋಚ್ ಸ್ಥಾನದಲ್ಲಿ ಮುಂದುವರಿಸಲಾಗಿದೆ. ರೋಹಿತ್ ಶರ್ಮಾರನ್ನು ಟಿ20 ವಿಶ್ವಕಪ್ ತಂಡಕ್ಕೆ ನಾಯಕನಾಗಿ ಮಾಡುವ ಇರಾದೆ ಬಿಸಿಸಿಐಗಿದೆ ಎನ್ನಲಾಗಿದೆ.
ಆದರೆ ಕಿಂಗ್ ಕೊಹ್ಲಿಯನ್ನು ಹೊರಗಿಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕೊಹ್ಲಿ ಕಳೆದ ಒಂದು ವರ್ಷದಿಂದ ಟಿ20 ಸರಣಿ ಆಡುತ್ತಿಲ್ಲ. ಈಗಾಗಲೇ ಭಾರತ ಯುವ ಕ್ರಿಕೆಟಿಗರ ಮೂಲಕ ಅನೇಕ ಪ್ರತಿಭೆಗಳನ್ನು ಕಂಡುಕೊಂಡಿದೆ.
ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಮೂರನೇ ಕ್ರಮಾಂಕದಲ್ಲಿ ನಿಮ್ಮ ಅಗತ್ಯವಿಲ್ಲ ಎಂದು ಕೊಹ್ಲಿಗೆ ಬಿಸಿಸಿಐ ಸಂದೇಶ ರವಾನಿಸುವ ಸಾಧ‍್ಯತೆಯಿದೆ. ಇದಕ್ಕೆ ಮೊದಲು ಬಿಸಿಸಿಐ ಅಧಿಕಾರಿಗಳು ಕೊಹ್ಲಿ ಜೊತೆ ಮಾತುಕತೆ ನಡೆಸಲಿದ್ದಾರೆ. ಹೀಗಾಗಿ ಜೂನ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಕೊಹ್ಲಿಗೆ ಸ್ಥಾನ ಸಿಗುವ ಸಾಧ‍್ಯತೆ ಕಡಿಮೆ ಎನ್ನಲಾಗುತ್ತಿದೆ.