ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಫೇಲ್

Krishnaveni K

ಸೋಮವಾರ, 8 ಸೆಪ್ಟಂಬರ್ 2025 (10:02 IST)
ದುಬೈ: ಏಷ್ಯಾ ಕಪ್ ನಲ್ಲಿ ಈ ಬಾರಿ ಎರಡನೇ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಮುನ್ನ ಕ್ಯಾಪ್ಟನ್ ಸೂರ್ಯಕುಮಾರ ಯಾದವ್ ಅಂಕಿ ಅಂಶಗಳನ್ನೊಮ್ಮೆ ನೋಡೋಣ.

ಪಾಕಿಸ್ತಾನದ ವಿರುದ್ಧ ಸೂರ್ಯಕುಮಾರ್ ಯಾದವ್ ಇದುವರೆಗೆ ಕ್ಲಿಕ್ ಆಗಿಲ್ಲ ಎನ್ನುವ ಅಪವಾದವಿದೆ. ಟಿ20 ಕ್ರಿಕೆಟ್ ನಲ್ಲಿ ಸೂರ್ಯಕುಮಾರ್ ಯಾದವ್ ಮಿಸ್ಟರ್ 360, ಧಮಾಕಾ ಬ್ಯಾಟರ್ ಎಂದೆಲ್ಲಾ ಖ್ಯಾತಿ ಪಡೆದವರು. ಅದಕ್ಕೆ ತಕ್ಕಂತೆ ಅವರು ಸ್ಪೋಟಕ ಬ್ಯಾಟಿಂಗ್ ನಡೆಸುತ್ತಾರೆ.

ಆದರೆ ಅದೇಕೋ ಪಾಕಿಸ್ತಾನ ವಿರುದ್ಧ ಅವರ ದಾಖಲೆ ಚೆನ್ನಾಗಿಲ್ಲ. ಪಾಕಿಸ್ತಾನ ವಿರುದ್ಧ 5 ಇನಿಂಗ್ಸ್ ನಿಂದ ಸೂರ್ಯಕುಮಾರ್ ಗಳಿಸಿದ್ದು ಕೇವಲ 64 ರನ್. ಗರಿಷ್ಠ ಸ್ಕೋರ್ 18. ಸ್ಟ್ರೈಕ್ ರೇಟ್ 118.5. ಕೇವಲ 12.80 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಹೀಗಾಗಿ ಎಲ್ಲಾ ತಂಡಗಳ ವಿರುದ್ಧ ಸಿಡಿದೆದ್ದಿರುವ ಸೂರ್ಯ ಪಾಕಿಸ್ತಾನದ ವಿರುದ್ಧ ಇದುವರೆಗೆ ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಿಲ್ಲ. ಆದರೆ ಕ್ರಿಕೆಟ್ ನಲ್ಲಿ ಹಿಂದಿನ ದಾಖಲೆಗಳು ಲೆಕ್ಕಕ್ಕೆ ಬರಲ್ಲ. ಆವತ್ತು ಹೇಗೆ ಆಡುತ್ತೇವೆ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಈಗ ನಾಯಕನ ಜವಾಬ್ಧಾರಿ ಕೂಡಾ ಇರುವುದರಿಂದ ಸೂರ್ಯ ಹಿಂದಿನ ಕಹಿ ಎಲ್ಲಾ ಬದಿಗೆ ಸರಿಸಿ ಅದ್ಭುತ ಇನಿಂಗ್ಸ್ ಆಡಿ ತಂಡಕ್ಕೆ ಗೆಲುವು ಕೊಡಿಸಬಹುದು ಎಂಬ ವಿಶ್ವಾಸವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ