ರಾಹುಲ್ ದ್ರಾವಿಡ್ ಸಲಹೆ ಪಾಲಿಸಲು ಮುಂದಾದ ಬಿಸಿಸಿಐ

ಶನಿವಾರ, 6 ಏಪ್ರಿಲ್ 2019 (09:16 IST)
ಮುಂಬೈ: ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ವಿವಾದಕ್ಕೀಡಾದ ಮೇಲೆ ಯುವ ಕ್ರಿಕೆಟಿಗರಿಗೆ ನಡತೆ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕು ಎಂದು ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮುಂತಾದ ದಿಗ್ಗಜ ಕ್ರಿಕೆಟಿಗರು ಸಲಹೆ ನೀಡಿದ್ದರು.


ಅದರಲ್ಲೂ ಮುಖ್ಯವಾಗಿ ದ್ರಾವಿಡ್ ಅಂಡರ್ 19 ಲೆವೆಲ್ ನಿಂದಲೇ ಕ್ರಿಕೆಟಿಗರಿಗೆ ಸಾರ್ವಜನಿಕವಾಗಿ ನಡೆದುಕೊಳ್ಳುವ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಬಿಸಿಸಿಐಗೆ ಸಲಹೆ ನೀಡಿದ್ದರು.

ದ್ರಾವಿಡ್ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಇದೀಗ ಅಂಡರ್ 16  ಆಟಗಾರರಿಗೆ ಜೀವನ ಕಲೆ, ನಡವಳಿಕೆ ಬಗ್ಗೆ ತರಬೇತಿ ನೀಡಲು ಯೋಜನೆಯೊಂದನ್ನು ಸಿದ್ಧಪಡಿಸಿದೆ. ಇದರಿಂದ ಆಟಗಾರರು ಸಾರ್ವಜನಿಕವಾಗಿಯೂ ಹದ್ದು ಮೀರಿ ವರ್ತಿಸದಂತೆ ನೋಡಿಕೊಳ್ಳುವುದು ಬಿಸಿಸಿಐ ಉದ್ದೇಶವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ