ಅನುರಾಗ್ ಠಾಕೂರ್-ಬುಕ್ಕಿ ನಂಟಿನ ಐಸಿಸಿ ಪತ್ರಕ್ಕೆ ಬಿಸಿಸಿಐ ಕ್ರಮವಿಲ್ಲ

ಸೋಮವಾರ, 27 ಏಪ್ರಿಲ್ 2015 (17:26 IST)
ಚಂಡೀಗಢದಲ್ಲಿ ನಡೆದ ಸಮಾರಂಭದಲ್ಲಿ ಶಂಕಿತ ಬುಕ್ಕಿ ಜತೆ ಬಿಸಿಸಿಐ ಕಾರ್ಯದರ್ಶಿ ಅನುರಾಜ್ ಠಾಕೂರ್ ಚಿತ್ರವಿದೆಯೆಂದು  ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರಿಗೆ ಐಸಿಸಿ ಬರೆದಿರುವ ಪತ್ರವನ್ನು ಕುರಿತು ಬಿಸಿಸಿಐ ಯಾವುದೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ. 
 
ಠಾಕುರ್ ಜೊತೆ  ಬುಕ್ಕಿ ಕರನ್ ಗಿಲ್ಲೋತ್ರಾ  ಅವರಿದ್ದ ಬಗ್ಗೆ ಐಸಿಸಿ ಬಿಸಿಸಿಐಗೆ ಪತ್ರ ಬರೆದು ಕಳಿಸಿದ್ದರೂ ಠಾಕೂರ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಐಸಿಸಿ ಸಿಇಒ ಡೇವ್ ರಿಚರ್ಡ್‌ಸನ್ ಈ ಕುರಿತು ಪತ್ರ ಬರೆದಿದ್ದು, ಇದರಲ್ಲಿ  ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಕೈವಾಡವಿರುವುದರಿಂದ ಇದಕ್ಕೆ ಬಿಸಿಸಿಐ ಸದಸ್ಯರು ಹೆಚ್ಚು ಗಮನಕೊಟ್ಟಿಲ್ಲ. 
 
ಪ್ರತಿಯೊಬ್ಬರಿಗೂ ಯಾರು ಐಸಿಸಿ ನಡೆಸುತ್ತಾರೆಂದು ಗೊತ್ತಿದೆ. ಶ್ರೀನಿವಾಸನ್ ನಿರ್ವಹಿಸಿದ ಆಡಳಿತದಿಂದ ಎಲುಬಿನ ಹಂದರಗಳು ಹೊರಬರುತ್ತಿರುವುದಿಂದ ಠಾಕೂರ್ ವರ್ಚಸ್ಸಿಗೆ ಹಾನಿ ತರಲು ಅವರು ಪ್ರಯತ್ನಿಸಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾವುದೇ ಚರ್ಚೆಯಿಲ್ಲ. ಔಪಚಾರಿಕವಾಗಿ ಶ್ರೀನಿವಾಸನ್ ಇದರ ಹಿಂದಿದ್ದಾರೆಂದು ನಮಗೆ ಗೊತ್ತಿದೆ ಎಂದು ಡಬ್ಲ್ಯುಸಿ ಸದಸ್ಯ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ