ಈ ಬಾರಿ ರಣಜಿ ಕ್ರಿಕೆಟ್ ನಡೆಯೋದು ಅನುಮಾನ

ಸೋಮವಾರ, 7 ಸೆಪ್ಟಂಬರ್ 2020 (12:38 IST)
ಮುಂಬೈ: ಕೊರೋನಾ ಕಾರಣದಿಂದ ಕ್ರಿಕೆಟ್ ವೇಳಾಪಟ್ಟಿಗಳು ಅಲ್ಲೋಲಕಲ್ಲೋಲವಾಗಿದೆ. ಈ ಬಾರಿ ರಣಜಿ ಕ್ರಿಕೆಟ್ ಮೇಲೂ ಕೊರೋನಾ ಕರಿಛಾಯೆ ಅಂಟಿದೆ.


ರಣಜಿ ಕ್ರಿಕೆಟ್ ನ್ನು ಭಾರತದಲ್ಲೆ ನಡೆಸಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಯಾವುದೇ ಟೂರ್ನಿ ನಡೆಸುವುದೂ ಸುರಕ್ಷಿತವಲ್ಲ. ಹೀಗಾಗಿ ಈ ಬಾರಿಯ ರಣಜಿ ಸೇರಿದಂತೆ ಇತರ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳನ್ನೂ ಬಿಸಿಸಿಐ ಆಯೋಜಿಸುವುದು ಅನುಮಾನವಾಗಿದೆ. ಹಾಗಾಗಿ ದೇಶೀಯ ಕ್ರಿಕೆಟಿಗರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ದೊಡ್ಡ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ