ಐಪಿಎಲ್ 13: ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಹಾರ್ದಿಕ್-ಕೃನಾಲ್ ಮಸ್ತಿ

ಭಾನುವಾರ, 6 ಸೆಪ್ಟಂಬರ್ 2020 (12:26 IST)
ದುಬೈ: ಐಪಿಎಲ್ ಆಡಲು ಯುಎಇಗೆ ತೆರಳಿರುವ ಮುಂಬೈ ಇಂಡಿಯನ್ಸ್ ಆಟಗಾರರು ಅಭ್ಯಾಸದ ಜತೆಗೆ ಮನಸ್ಸು ಹಗುರಾಗಿಸಲು ಮಸ್ತಿಯೂ ಮಾಡುತ್ತಿದ್ದಾರೆ.


ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಸಹೋದರ ಕೃನಾಲ್ ಜತೆಗೆ ಬಾಲಿವುಡ್ ಹಾಡುಗಳನ್ನು ಹಾಡುತ್ತಾ ನೃತ್ಯ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಅಭ್ಯಾಸದ ಜತೆಗೆ ರಿಲ್ಯಾಕ್ಸೇಷನ್ ಗೆ ಈ ಕ್ರಮ ಎಂದು ಬರೆದುಕೊಂಡಿದ್ದಾರೆ. ಮೊನ್ನೆಯಷ್ಟೇ ದೆಹಲಿ ಆಟಗಾರ ಶಿಖರ್ ಧವನ್ ತಮ್ಮ ಸಹ ಆಟಗಾರ ಪೃಥ‍್ವಿ ಶಾ ಜತೆಗೆ ನೃತ್ಯ ಮಾಡುವ ದೃಶ್ಯಗಳು ವೈರಲ್ ಆಗಿತ್ತು. ಇದೀಗ ಪಾಂಡ್ಯ ಸಹೋದರರ ಸರದಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ