ಕ್ಯಾಚ್ ಬಿಟ್ಟಿದ್ದಕ್ಕೆ ಬೌಲರ್ ಗೆ ಮೈದಾನದಲ್ಲೇ ಕಪಾಳ ಮೋಕ್ಷ

ಬುಧವಾರ, 23 ಫೆಬ್ರವರಿ 2022 (09:10 IST)
ಇಸ್ಲಾಮಾಬಾದ್: ಕ್ರಿಕೆಟ್ ಮೈದಾನದಲ್ಲಿ ಫೀಲ್ಡರ್ ಗಳು ಕ್ಯಾಚ್ ಬಿಡುವುದು ಸಾಮಾನ್ಯ. ಆದರೆ ಈ ಪಂದ್ಯದಲ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಬೌಲರ್ ಸಹ ಆಟಗಾರನ ಕೆನ್ನೆಗೆ ಹೊಡೆದಿದ್ದಾರೆ.

ಇದು ನಡೆದಿರುವುದು ಪಾಕಿಸ್ತಾನ್ ಕ್ರಿಕೆಟ್ ಲೀಗ್ ನಲ್ಲಿ. ಪಾಕ್ ಬೌಲರ್ ಹ್ಯಾರಿಸ್ ರೌಫ್ ತನ್ನ ಬೌಲಿಂಗ್ ನಲ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಸಹ ಆಟಗಾರ ಕಮ್ರಾನ್ ಗುಲಾಮ್ ಗೆ ಮೈದಾನದಲ್ಲೇ ಕಪಾಳ ಮೋಕ್ಷ ಮಾಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನ ಕ್ರಿಕೆಟ್ ಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಕಪಾಳ ಮೋಕ್ಷ ಮಾಡಿದ ಬೌಲರ್ ರೌಫ್ ಲಾಹೋರ್ ಖಲಂದರ್ಸ್ ತಂಡದ ಆಟಗಾರರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ