ಇಂದೋರ್: ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರನ್ನು ಆಯ್ಕೆದಾರರು 2025-26ನೇ ಸಾಲಿನ ರಣಜಿ ಟ್ರೋಫಿಗೆ ನಾಯಕನಾಗಿ ಆಯ್ಕೆ ಮಾಡಿದೆ. ಈ ವಿಚಾರವನ್ನು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಂಪಿಸಿಎ) ಅಧಿಕಾರಿಯೊಬ್ಬರು ಶುಕ್ರವಾರ ರಾತ್ರಿ ಮಾಹಿತಿ ನೀಡಿದ್ದಾರೆ.
ರಜತ್ ಪಾಟೀದಾರ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದಾದ ಬಳಿಕ ರಜತ್ ಅದೃಷ್ಟ ಬದಲಾಗಿದ್ದು, ಇದೀಗ ಅವರು ಇರಾನಿ ಕಪ್‌ಗೆ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ನಡುವೆ ಅವರಿಗೆ ಮಧ್ಯಪ್ರದೇಶ ರಣಜಿ ತಂಡದ ನಾಯಕರನ್ನಾಗಿಯೂ ನೇಮಕ ಮಾಡಲಾಗಿದೆ.
ಅಧಿಕಾರಿಯ ಮಾಹಿತಿ ಪ್ರಕಾರ, ಮಧ್ಯಪ್ರದೇಶದ 15 ಸದಸ್ಯರ ರಣಜಿ ಟ್ರೋಫಿ ತಂಡ ಹೀಗಿದೆ: ರಜತ್ ಪಾಟೀದಾರ್ (ನಾಯಕ), ಯಶ್ ದುಬೆ, ಹರ್ಷ್ ಗಾವ್ಳಿ, ಶುಭಂ ಶರ್ಮಾ, ಹಿಮಾಂಶು ಮಂತ್ರಿ, ಹರ್‌ಪ್ರೀತ್ ಸಿಂಗ್, ವೆಂಕಟೇಶ್ ಅಯ್ಯರ್, ಸಾಗರ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸರಾಂಶ್ ಜೈನ್, ಅಧೀರ್ ಪ್ರತಾಪ್, ಆರ್ಯನ್ ಪಾಂಡೆ, ಅರ್ಷದ್ ಖಾನ್, ಅನುಭವ್ ಅಗರ್ವಾಲ್ ಮತ್ತು ಕುಲದೀಪ್ ಸೇನ್ ಇದ್ದಾರೆ.