ಮೆಕಲಮ್ ಔಟಾಗಿದ್ದರಿಂದ ಆಸೀಸ್ ಮೇಲುಗೈ ಪಡೆಯಿತು: ಚಾಪೆಲ್

ಸೋಮವಾರ, 30 ಮಾರ್ಚ್ 2015 (12:46 IST)
ಮೆಕಲಮ್ ನಾಯಕತ್ವ ಮತ್ತು ಆಕ್ರಮಣಕಾರಿ ಆರಂಭಿಕ ಆಟದಿಂದ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಮೊದಲ ಬಾರಿಗೆ ಫೈನಲ್ ಹಂತಕ್ಕೆ ತಲುಪಿತು. ಆದರೆ ಫೈನಲ್ಸ್‌ನಲ್ಲಿ  ಮೆಕಲಮ್ ವೈಫಲ್ಯದಿಂದ ವಿಶ್ವಕಪ್ ಫೈನಲ್ಸ್ ಪಂದ್ಯ  ಆಸೀಸ್ ಮೇಲುಗೈ ಹೊಂದಿದ ಒಂದು ಕಡೆಯ ಆಟವಾಗಿ ಪರಿಣಮಿಸಿತು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ  ಚಾಪೆಲ್ ಹೇಳಿದ್ದಾರೆ.
 
ಮೆಕಲಮ್ 8 ಪಂದ್ಯಗಳಿಂದ 188.50 ರನ್ ಸರಾಸರಿಯಲ್ಲಿ 328 ರನ್ ಕಲೆಹಾಕಿದ್ದರು. ಆದರೆ ಅತೀ ಅಗತ್ಯವಿದ್ದ ದಿನದಂದು  ಅವರು ಆಕ್ರಮಣಕಾರಿ ಪ್ರವೃತ್ತಿ ತೋರಲು ಸಾಧ್ಯವಾಗದೇ ಮಿಚೆಲ್ ಸ್ಟಾರ್ಕ್ ಎಕ್ಸ್‌ಪ್ರೆಸ್ ಪೇಸ್‌ಗೆ ಡಕ್ ಔಟ್ ಆದರು. 
 
 ಮೆಕಲಮ್ ವಿಕೆಟ್‌ನಿಂದ ನ್ಯೂಜಿಲೆಂಡ್‌ಗೆ ಹಿನ್ನಡೆ ಉಂಟಾಗಿ ಆಸೀಸ್ ಚೇತರಿಸಿಕೊಂಡಿತು ಎಂದು ಚಾಪೆಲ್ ಹೇಳಿದರು. ಸ್ಟಾರ್ಕ್ ವಿರುದ್ಧ ಮೆಕಲಮ್ ತಂತ್ರವನ್ನು ಅನೇಕ ಕ್ರಿಕೆಟ್ ತಜ್ಞರು ಪ್ರಶ್ನಿಸಿದ್ದು, ಹೈ ಪ್ರೊಫೈಲ್ ಪಂದ್ಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಆಡಬೇಕಿತ್ತು ಎಂದು ಪ್ರತಿಕ್ರಿಸಿದ್ದಾರೆ. ಆದರೆ ಮೆಕಲಮ್ ನಡೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾಜಿ ನಾಯಕ ಗವಾಸ್ಕರ್ ಹೇಳಿದ್ದಾರೆ. 
 
ಮೆಕಲಮ್ ಸರಣಿಯುದ್ದಕ್ಕೂ ಅದೇ ರೀತಿ ಆಡಿದ್ದಾರೆ. ಮೆಕಲಮ್ ಆರಂಭಿಕ ಆಟದಿಂದ ತಂಡಕ್ಕೆ ಅನುಕೂಲವಾಯಿತು ಎಂದು ಗವಾಸ್ಕರ್ ಹೇಳಿದ್ದಾರೆ. ಆದರೆ ಮೆಕಲಮ್ ಔಟಾದ ಬಳಿಕ ಮೇಲಿನ ಕ್ರಮಾಂಕದ ಆಟಗಾರರ ನಷ್ಟದಿಂದ ಕಿವೀಸ್‌ ರನ್ ವೇಗವನ್ನು ಮೊಟಕುಗೊಳಿಸಿತು ಎಂದು ಹೇಳಿದ್ದಾರೆ. ಕಿವೀಸ್‌ ತಂಡವನ್ನು ಧೃತಿಗೆಡಿಸಿದ ಇನ್ನೊಂದು ಸಂಗತಿ ಆಸೀಸ್‌ನ ಅಗ್ರ ಗುಣಮಟ್ಟದ ಪೇಸ್ ದಾಳಿ ಜೊತೆಗೆ ಉತ್ತಮ ಫೀಲ್ಡಿಂಗ್ ಎಂದು ಗವಾಸ್ಕರ್ ಹೇಳಿದರು. 

ವೆಬ್ದುನಿಯಾವನ್ನು ಓದಿ