12 ವರ್ಷದ ಕಠಿಣ ಪರಿಶ್ರಮ ಫಲವೇ ಒಲಿಂಪಿಕ್ ಕಂಚಿನ ಪದಕ: ಸಾಕ್ಷಿ ಮಲಿಕ್

ಗುರುವಾರ, 18 ಆಗಸ್ಟ್ 2016 (16:11 IST)
ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ನಿರೀಕ್ಷೆಯನ್ನು ಅಂತ್ಯಗೊಳಿಸಿ ಕಂಚಿನ ಪದಕ ಗಳಿಸಿದ ಸಾಕ್ಷಿ ಮಲಿಕ್,  ಕಂಚಿನ ಪದಕ ನನ್ನ 12 ವರ್ಷಗಳ ಕಠಿಣ ಪರಿಶ್ರಮದ ಫಲ ಎಂದು ಹೇಳಿದ್ದಾರೆ.
ಒಲಿಂಪಿಕ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಇತಿಹಾಸ ಸೃಷ್ಟಿಸಿದ ಸಾಕ್ಷಿ ಮಲಿಕ್, ದೇಶದಲ್ಲಿಯೇ ಒಲಿಂಪಿಕ್ ಪದಕ ಗಳಿಸಿದ ಮಹಿಳೆಯರಲ್ಲಿ ನಾಲ್ಕನೇಯವರಾಗಿ ಹೊರಹೊಮ್ಮಿದ್ದಾರೆ. 
 
ನನ್ನ 12 ವರ್ಷಗಳ ಕಠಿಣ ಪರಿಶ್ರಮದ ಫಲ (ಮೇರಿ ಬಾರ್ ಸಾಲ್ ಕಿ ತಪಸ್ಯಾ ರಂಗ ಲಾಯಿ ಹೈ)ವಾಗಿದೆ. ನಾನು ಕಂಚಿನ ಪದಕ ಗೆದ್ದು ದೇಶದಲ್ಲಿಯೇ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಗೌರವಕ್ಕೆ ಪಾತ್ರನಾಗುತ್ತೇನೆ ಎಂದು ಯೋಚಿಸಿರಲಿಲ್ಲ ಎಂದು ತಿಳಿಸಿದ್ದಾರೆ.
 
ಹರಿಯಾಣಾ ಮೂಲದ 23 ವರ್ಷ ವಯಸ್ಸಿನ ಸಾಕ್ಷಿ ಮಲಿಕ್, 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪಡೆದಿದ್ದರು. 
 
ಸ್ಪರ್ಧೆಯ ಆರಂಭದಿಂದಲೂ ಆಕ್ರಮಣಕಾರಿಯಾಗಿದ್ದ ಕಿರ್ಗಿಸ್ತಾನದ ಕುಸ್ತಿಪಟು ಐಸಿಲೂ ಟೈನೀಬೆಕೋವಾ ಗೆಲ್ಲುವುದು ಖಚಿತ ಎನ್ನುವ ಭಾವನೆ ಮೂಡಿಸಿದ್ದರು. ಆದರೆ, ಸ್ಪರ್ಧೆಯ ಕೊನೆಯ ಕೆಲವೇ ಸೆಕೆಂಡ್‌ಗಳಲ್ಲಿ ತಿರುಗೇಟು ನೀಡಿದ ಸಾಕ್ಷಿ ಎದುರಾಳಿಯನ್ನು ಸೋಲಿನ ಅಂಚಿಗೆ ತಳ್ಳಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ