ವಿಶ್ವಾಸಾರ್ಹ ಮೂಲಗಳ ಪ್ರಕಾರ, ಲೋಧಾ ಸಮಿತಿಯು ಅಧ್ಯಕ್ಷ ಅನುರಾಗ್ ಠಾಕುರ್, ಕಾರ್ಯದರ್ಶಿ ಅಜಯ್ ಶಿರ್ಕೆ, ಕೋಶಾಧಿಕಾರಿ ಅನಿರುದ್ ಚೌಧರಿ ಮತ್ತು ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಸೇರಿದಂತೆ ಬಿಸಿಸಿಐನ ಎಲ್ಲಾ ಪದಾಧಿಕಾರಿಗಳಿಗೆ ಲೋಧಾ ಸಮಿತಿಯು ನಿರ್ದೇಶನ ನೀಡಿದೆ.
ಲೋಧಾ ಸಮಿತಿಯ ಪತ್ರದಲ್ಲಿ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಎಲ್ಲಾ ಚುನಾವಣೆಗಳನ್ನು ತಡೆಹಿಡಿಯಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ಸಮಿತಿಯು ಕಾರ್ಯಯೋಜನೆ ರೂಪಿಸುವ ಪ್ರಕ್ರಿಯೆಯಲ್ಲಿದ್ದು, ಮುಂದಿನ ಸೂಚನೆ ಬರುವ ತನಕ ಬಿಸಿಸಿಐ ಮತ್ತು ರಾಜ್ಯಸಂಸ್ಥೆಗಳು ಎಲ್ಲಾ ಚುನಾವಣೆಗಳನ್ನು ತಡೆಹಿಡಿಯಬೇಕು ಎಂದು ಸೂಚಿಸಲಾಗಿದೆ.