ಸಚಿನ್ ತೆಂಡುಲ್ಕರ್ ಹೇಳುವ ಮಾತೇ ಇದು?!

ಶನಿವಾರ, 3 ಡಿಸೆಂಬರ್ 2016 (15:57 IST)
ಮುಂಬೈ: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಯಾವತ್ತೂ ಸೌಮ್ಯ ಸ್ವಭಾವದವರೆಂದೇ ಪರಿಚಿತರು. ಅವರು ಯಾವತ್ತೂ ವಿವಾದಕ್ಕೆ ಈಡಾಗುವಂತಹ ಹೇಳಿಕೆ ನೀಡಿದವರಲ್ಲ. ಅಂತಹ ಸಚಿನ್ ಕ್ರಿಕೆಟ್ ಫೀಲ್ಡ್ ನಲ್ಲಿ ವೈರತ್ವ ಇದ್ದರೇ ಚೆಂದ ಎಂದಿದ್ದಾರೆ.

ಗಾಬರಿಯಾಗಬೇಕಿಲ್ಲ. ಅವರು ಹೇಳಿದ್ದು ಆರೋಗ್ಯಕರ ಪೈಪೋಟಿ ಬಗ್ಗೆ. ಕ್ರಿಕೆಟ್ ಮೈದಾನದಲ್ಲಿ ಆರೋಗ್ಯಕರ ವೈರತ್ವ ಇರಬೇಕು ಎಂದಿದ್ದಾರೆ. ಹಾಗಿದ್ದರೆ ಮಾತ್ರ ಟೆಸ್ಟ್ ಕ್ರಿಕೆಟ್ ಇನ್ನಷ್ಟು ಆಸಕ್ತಿದಾಯಕವಾಗುತ್ತದೆ ಎಂದಿದ್ದಾರೆ ಸಚಿನ್.

ತಮ್ಮ ಕಾಲದಲ್ಲಿ ಸುನಿಲ್ ಗವಾಸ್ಕರ್- ಇಮ್ರಾನ್ ಖಾನ್ ನಡುವೆ ಪೈಪೋಟಿಯಿತ್ತು. ಇದರಿಂದಾಗಿ ನಾವು ಹಲವು ಟೆಕ್ನಿಕ್ ಗಳ ಬಗ್ಗೆ ಕಲಿಯಲು ಸಾಧ್ಯವಾಗಿತ್ತು. ಅಲ್ಲದೆ ವಿವಿ ರಿಚರ್ಡ್ಸ್-ಜೆಫ್ ಥಾಮ್ಸನ್, ಬ್ರಿಯಾನ್ ಲಾರಾ-ಗ್ಲೆನ್ ಮೆಕ್ ಗ್ರಾಥ್ ನಡುವಿನ ಪೈಪೋಟಿ ನೋಡಲು ಮುದ ನೀಡುತ್ತಿತ್ತು ಎಂದು ತೆಂಡುಲ್ಕರ್ ಬಣ್ಣಿಸಿದ್ದಾರೆ. ಅಂತಹ ಪೈಪೋಟಿ ಇಂದು ಕಾಣುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ಅಂತಹ ಸ್ಪರ್ಧೆ ಇದ್ದರೇ ಕ್ರಿಕೆಟ್ ನೋಡಲು ಆಸಕ್ತಿ ಹುಟ್ಟಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ