ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯ ಕೇಪ್ ಟೌನ್ ನಲ್ಲಿ ನಡೆದಿದ್ದು ಕೇವಲ ಎರಡೇ ದಿನಕ್ಕೆ ಪಂದ್ಯ ಮುಕ್ತಾಯವಾಗಿದೆ.
ಈ ಪಂದ್ಯ ನಡೆದ ಪಿಚ್ ಗೆ ಮ್ಯಾಚ್ ರೆಫರಿ ಕಳಪೆ ರೇಟಿಂಗ್ ಖಂಡಿತಾ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹಾಗೂ ಆಫ್ರಿಕಾ ಮಾಜಿ ವೇಗಿ ಶಾನ್ ಪೊಲ್ಲಾಕ್ ಅಭಿಪ್ರಾಯಪಟ್ಟಿದ್ದಾರೆ.
ಮೊದಲ ದಿನವೇ 23 ವಿಕೆಟ್ ಉರುಳಿದೆಯೆಂದರೆ ಮ್ಯಾಚ್ ರೆಫರಿ ಖಂಡಿತಾ ಪಿಚ್ ನ್ನು ಡೇಂಜರಸ್ ಎಂದು ಪರಿಗಣಿಸಬಹುದು ಎಂದು ರವಿಶಾಸ್ತ್ರಿ ಹೇಳಿದರೆ ಶಾನ್ ಪೊಲ್ಲಾಕ್ ಕೂಡಾ ಇದು ಖಂಡಿತಾ ಉತ್ತಮ ಪಿಚ್ ಅಲ್ಲ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡಿರುವುದು ಕ್ರಿಕೆಟ್ ಗೆ ಸಂಬಂಧಿಸಿದಂತೆ ಖಂಡಿತಾ ಉತ್ತಮ ಬೆಳವಣಿಗೆಯಲ್ಲ. ಇದೇ ರೀತಿ ಭಾರತದ ಮೈದಾನಗಳಲ್ಲಿ ಸ್ಪಿನ್ ಪಿಚ್ ನಿಂದಾಗಿ ಮೂರೇ ದಿನಕ್ಕೆ ಪಂದ್ಯ ಮುಕ್ತಾಯವಾಗಿದ್ದಾಗ ಕೆಲವು ಮಾಜಿ ಕ್ರಿಕೆಟಿಗರು ಇದು ಕೆಟ್ಟ ಪಿಚ್ ಎಂದು ಟೀಕಿಸಿದ್ದು ಇದೆ. ಇದೀಗ ಸಂಪೂರ್ಣ ಬೌಲರ್ ಗಳ ನೆರವಾಗುವ ಪಿಚ್ ತಯಾರಿಸಿದರೂ ಕನಿಷ್ಠ ಪಂದ್ಯ ಮೂರರಿಂದ ನಾಲ್ಕು ದಿನದವರೆಗೂ ತಲುಪದೇ ಇರುವುದು ವಿಪರ್ಯಾಸ.