ಸಿಪಿಎಲ್: ತಲ್ಲಾವಾಹ್ಸ್ ತಂಡವನ್ನು ಪಾರು ಮಾಡಿದ ಶಕೀಬ್, ಗೇಲ್

ಶನಿವಾರ, 16 ಜುಲೈ 2016 (20:13 IST)
ಕಿಂಗ್‌ಸ್ಟನ್‌ನಲ್ಲಿ ನಡೆದ ಕ್ಯಾರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಮತ್ತು ಕ್ರಿಸ್ ಗೇಲ್ ನಡುವೆ ಉತ್ತಮ ಜತೆಯಾಟದಿಂದ ಗಯಾನ ಅಮೆಜಾನ್ ವಾರಿಯರ್ಸ್ ವಿರುದ್ಧ ಜಮೈಕಾ ತಲ್ಲಾವಾಹ್ಸ್ 5 ವಿಕೆಟ್ ಜಯಗಳಿಸಿದೆ.

128ಕ್ಕೆ 6 ವಿಕೆಟ್ ಚೇಸ್ ಮಾಡಿದ ಜಮೈಕಾ ತಾಲ್ಲವಾಸ್ ಆರಂಭದಲ್ಲೇ  2 ರನ್ನಿಗೆ 4 ವಿಕೆಟ್‌ಗಳನ್ನು  ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು.  ವಾರಿಯರ್ಸ್ ತಂಡದ 128 ರನ್ ಬೆನ್ನತ್ತಿದ್ದ ಜಮೈಕಾ ಶಕೀಬ್ ಅವರ ಅಜೇಯ 53 ಮತ್ತು ಗೇಲ್ ಅಜೇಯ 45 ರನ್ ನೆರವಿನಿಂದ ತಮ್ಮ ಟಿ 20 ಅನುಭವ ಬಳಸಿಕೊಂಡು ತಂಡವನ್ನು ಸೋಲಿನಿಂದ ಪಾರುಮಾಡಿದರು. 
 
 ಗೇಲ್ ಮೇಲಿನ ಕ್ರಮಾಂಕ ಕುಸಿಯುವುದನ್ನು ಅಸಹಾಯಕತೆಯಿಂದ ನೋಡಿ 45ಕ್ಕೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸಿಗಿಳಿದರು. ಗೇಲ್ ಆರಂಭದಲ್ಲೇ ಹೊಡೆಯಲು ಆರಂಭಿಸಿ ಮೊದಲ ಎರಡು ಶಾಟ್‌ಗಳು ಭಾರೀ ಸಿಕ್ಸರ್‌ಗಳಾಗಿದ್ದವು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ