ಸಿಎಸ್‌ಕೆಯ ಅಪಮೌಲ್ಯ: ತರಾಟೆಗೆ ತೆಗೆದುಕೊಂಡ ಬಿಸಿಸಿಐ ಹಣಕಾಸು ಸಮಿತಿ

ಶುಕ್ರವಾರ, 22 ಮೇ 2015 (17:24 IST)
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ಲಕ್ಷ ರೂ.ಗಳಿಗೆ ಅಪಮೌಲ್ಯ ಮಾಡಿರುವುದರ ವಿರುದ್ಧ ಬಿಸಿಸಿಐ ಹಣಕಾಸು ಸಮಿತಿ ತರಾಟೆಗೆ ತೆಗೆದುಕೊಂಡಿದೆ. ಹಣಕಾಸು ಸಮಿತಿ ಸಭೆಯಲ್ಲಿ ಸಿಎಸ್‌ಕೆ ಮೌಲ್ಯಮಾಪನವನ್ನು ಚರ್ಚಿಸಲಾಯಿತು ಮತ್ತು ಮುಂದಿನ ವಾರ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ಕಾನೂನು ವಿಷಯಗಳ ಬಗ್ಗೆ ಬಿಸಿಸಿಐ ವೆಚ್ಚವು ಕಳೆದ ಎರಡು ವರ್ಷಗಳಲ್ಲಿ 56 ಕೋಟಿ ರೂ.ವರೆಗೆ ಮುಟ್ಟಿದ್ದನ್ನು ಕೂಡ ಸಭೆಯಲ್ಲಿ ಬಹಿರಂಗ ಮಾಡಲಾಯಿತು. 
 
 ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುಕುಲ್ ಮುದ್ಗಲ್ ಸಮಿತಿಗೆ 1.5 ಕೋಟಿ ಶುಲ್ಕ ನೀಡಲಾಗಿದ್ದು, ಬಿಸಿಸಿಐ ಸುಪ್ರೀಂಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಗೆ 3.90 ಕೋಟಿ ರೂ. ಖರ್ಚು ಮಾಡಿರುವುದನ್ನು ಹಣಕಾಸು ಸಮಿತಿ ತಿಳಿಸಿತು.

  ಮಹಿಳಾ ಕ್ರಿಕೆಟರುಗಳನ್ನು ಕಡೆಗಣಿಸಿರುವ ಬಗ್ಗೆ ಹಣಕಾಸು ಸಮಿತಿ ಗಮನಸೆಳೆಯಿತು.  ಮಹಿಳಾ ಕ್ರಿಕೆಟಿಗರಿಗೆ ಶ್ರೇಣೀಕೃತ ಪಾವತಿ ವ್ಯವಸ್ಥೆ ಆರಂಭಿಸಲು ಸಮಿತಿ ನಿರ್ಧರಿಸಿತು. 
 
ಸ್ಥಳೀಯ ಕ್ರಿಕೆಟ್ ಆಡುವ ಕಿರಿಯ ಮತ್ತು ಟೀಂ ಕ್ರಿಕೆಟರ್‌ಗಳಿಗೆ ಹೆಚ್ಚು ಹಣ ನೀಡಲು ಸಮಿತಿ ನಿರ್ಧರಿಸಿತು. ಇದಕ್ಕೆ ಮುಂಚೆ ಅಂಡರ್- 16 ಬಾಲಕರು ಪ್ರತಿ ಪಂದ್ಯಕ್ಕೆ ದಿನಕ್ಕೆ 500 ರೂ. ಮೊತ್ತವನ್ನು ಪಡೆಯುತ್ತಿದ್ದರು. ಹಣಕಾಸು ಸಮಿತಿ ಈ ಮೊತ್ತವನ್ನು 1000 ರೂ.ಗೆ ಹೆಚ್ಚಿಸಲು ಯೋಜಿಸಿದೆ. ಅಂಡರ್- 23 ಬಾಲಕರಿಗೆ ಪ್ರತಿ ದಿನಕ್ಕೆ 2500 ರೂ. ನೀಡಲು ಯೋಜಿಸಿದೆ. 

ವೆಬ್ದುನಿಯಾವನ್ನು ಓದಿ