ಈ ಸಾಲಿನ ಶ್ರೇಷ್ಟ ಕ್ರಿಕೆಟರ್‌ಗಳಿಗೆ ಮುಂಬೈನಲ್ಲಿ ಸಿಯಟ್ ಸನ್ಮಾನ

ಸೋಮವಾರ, 25 ಮೇ 2015 (13:46 IST)
ಕೆಲವರು ಅದೃಷ್ಟದಿಂದ ಯಶಸ್ಸನ್ನು ಗಳಿಸುತ್ತಾರೆ. ಆದರೆ ಬಹುತೇಕ ಜನರು ತಮ್ಮ ಪರಿಶ್ರಮದಿಂದ ಯಶಸ್ಸು ಸಾಧಿಸುತ್ತಾರೆ. ಇಂತಹವರನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರ ಯಶಸ್ಸಿಗೆ ಸನ್ಮಾನಿಸಲು ಸಿಯಟ್ ಕ್ರಿಕೆಟ್ ಪ್ರಶಸ್ತಿಗಳಿಗಿಂತ ಉತ್ತಮ ಮಾರ್ಗ ಯಾವುದೂ ಇಲ್ಲ.

 1995ರಲ್ಲಿ ಉದ್ಘಾಟನೆಯಾದ ಸಿಯಟ್ ಕ್ರಿಕೆಟ್ ಪ್ರಶಸ್ತಿಗಳು ತನ್ನ ವಿಶಿಷ್ಠ ಮತ್ತು ವಿಶ್ವಾಸಾರ್ಹ ಸಿಯಟ್ ಕ್ರಿಕೆಟ್ ರೇಟಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಾಧನೆಗಳ ಜಾಡು ಹಿಡಿದು ಪ್ರತಿ ವರ್ಷ ಗಮನಾರ್ಹ ಪ್ರದರ್ಶನ ನೀಡುವವರಿಗೆ ಪ್ರಶಸ್ತಿ ನೀಡುತ್ತದೆ. 
 
ಕ್ರಿಕೆಟ್‌ನ ಮೂವರು ದಂತಕಥೆಗಳಾದ ಕ್ಲೈವ್ ಲಾಯ್ಡ್, ಐಯಾನ್ ಚಾಪೆಲ್ ಮತ್ತು ಸುನಿಲ್ ಗವಾಸ್ಕರ್ ಈ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಅನೇಕ ಮಾಜಿ ಮತ್ತು ಪ್ರಸಕ್ತ ಕ್ರಿಕೆಟ್ ಸ್ಟಾರ್‌ಗಳು ಈ ಪ್ರಶಸ್ತಿಗೆ ತಮ್ಮ ಹೆಸರುಗಳನ್ನು ದಾಖಲಿಸಿದ್ದಾರೆ. 
 
ಸಿಯಟ್ ಕ್ರಿಕೆಟ್ ರೇಟಿಂಗ್(ಸಿಸಿಆರ್) ಕ್ರಿಕೆಟ್ ಜಗತ್ತಿನಲ್ಲಿ ಮೊದಲನೆಯದಾಗಿದ್ದು,  ವೆಸ್ಟ್ ಇಂಡೀಸ್ ಬ್ರಿಯಾನ್ ಲಾರಾ ಮೊದಲ ಸಿಯಟ್ ಅಂತಾರಾಷ್ಟ್ರೀಯ ಕ್ರಿಕೆಟರ್ ಎಂದು 1996ರಲ್ಲಿ ಹೆಸರು ಪಡೆದಿದ್ದರು. 
 
 2005ರಲ್ಲಿ ಟ್ವೆಂಟಿ 20 ಕ್ರಿಕೆಟ್ ಚೇತರಿಕೆ ಪಡೆಯುತ್ತಿದ್ದಂತೆ, ಹೊಸ ವ್ಯವಸ್ಥೆಯನ್ನು ರೂಪಿಸುವ ಅಗತ್ಯ ಕಂಡುಬಂತು. ಅದು ಬ್ಯಾಟ್ಸ್‌ಮನ್ ಸ್ಟ್ರೈಕ್ ರೇಟ್ ಮತ್ತು ಬೌಲರ್ ಎಕಾನಮಿ ರೇಟ್ ಮುಂತಾದ ಮಾನದಂಡಗಳನ್ನು ಪರಿಗಣಿಸಲು ನಿರ್ಧರಿಸಲಾಯಿತು. ಅದಕ್ಕಾಗಿ 2007ರ ಅಕ್ಟೋಬರ್‌ನಲ್ಲಿ ಸಿಯಟ್ ಟಿ20 ರೇಟಿಂಗ್ ಆರಂಭಿಸಲಾಯಿತು. 
 ಪ್ರಶಸ್ತಿ ಪಟ್ಟಿಯಲ್ಲಿ ಸಿಸಿಆರ್ ಶ್ರೇಷ್ಟ ಬೌಲರ್, ಸಿಸಿಆರ್ ಶ್ರೇಷ್ಟ ಬ್ಯಾಟ್ಸ್‌ಮನ್, ಸಿಸಿಆರ್ ಶ್ರೇಷ್ಟ ಕ್ರಿಕೆಟರ್ ಮತ್ತು ಸಿಸಿಆರ್ ಶ್ರೇಷ್ಟ ಕ್ರಿಕೆಟ್ ತಂಡ ಮುಂತಾದವು ಸೇರಿದ್ದು, ಸಿಯಟ್ ಅಂಡರ್ 19 ಮತ್ತು ಟಿ 20 ರೇಟಿಂಗ್‌ಗಳನ್ನು ಕೂಡ ಒಳಗೊಂಡಿದೆ. 
 
ಕೆಳಗೆ ಸಿಯಟ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೊಡಲಾಗಿದೆ. 
1995-96ರ ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
1996-97 ವೆಂಕಟೇಶ್ ಪ್ರಸಾದ್ (ಭಾರತ)
1997-98 ಸನತ್ ಜಯಸೂರ್ಯ (ಶ್ರೀಲಂಕಾ)
1998-99 ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
1999-00ರ ಸೌರವ್ ಗಂಗೂಲಿ (ಭಾರತ)
2000-01 ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)
2001-02 ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)
2002-03 ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
2003-04 ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
2004-05 ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
2005-06 ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
2006-07 ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)
2007-08 ಮಹೇಲ ಜಯವರ್ಧನೆ (ಶ್ರೀಲಂಕಾ)
2008-09 ಗೌತಮ್ ಗಂಭೀರ್ (ಭಾರತ)
2009-10 ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ)
2010-11 ಜೋನಾಥನ್ ಟ್ರಾಟ್ (ಇಂಗ್ಲೆಂಡ್)
2011-12 ವಿರಾಟ್ ಕೊಹ್ಲಿ (ಭಾರತ)
2013-14 ವಿರಾಟ್ ಕೊಹ್ಲಿ (ಭಾರತ)
 
ಸಿಯಟ್ ಪ್ರಶಸ್ತಿ ವಿಜೇತರಲ್ಲಿ ಮುತ್ತಯ್ಯ ಮುರಳೀಧರನ್ ಎರಡಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಏಕಮಾತ್ರ ಆಟಗಾರ. ವಿರಾಟ್ ಕೊಹ್ಲಿ ಶ್ರೀಲಂಕಾ ಸ್ಟಾರ್ ಬೌಲರ್‌ನನ್ನು ಸರಿಗಟ್ಟುವ ಸಾಮರ್ಥ್ಯದ ಏಕಮಾತ್ರ ಕ್ರಿಕೆಟ್ ಆಟಗಾರನಾಗಿದ್ದು, ಈ ಬಾರಿ ಅದನ್ನು ಸಾಧಿಸುತ್ತಾರೆಯೇ ಎಂದು ಕಾದುನೋಡಬೇಕಾಗಿದೆ. 

ವೆಬ್ದುನಿಯಾವನ್ನು ಓದಿ