ಸೆಲಿಬ್ರಿಟಿಗಳು ಹಾಗೆ ಮಾಡಬಾರದು: ಧೋನಿಗೆ ನ್ಯಾಯಾಧೀಶರ ತರಾಟೆ

ಸೋಮವಾರ, 10 ಆಗಸ್ಟ್ 2015 (18:25 IST)
ಮಹೇಂದ್ರ ಸಿಂಗ್ ಧೋನಿ ಅವರನ್ನು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಪ್ರಕರಣ ನಡೆದಿದೆ. ವಿಷ್ಣು ವೇಷದಲ್ಲಿ ಕಾಣಿಸಿಕೊಂಡಿದ್ದ ಧೋನಿ ರೀಬಾಕ್ ಶೂ ಹಿಡಿದಿದ್ದ  ಭಾವಚಿತ್ರ ಪ್ರಕಟಿಸಲಾಗಿತ್ತು.

ಈ ಕುರಿತು ವಕೀಲ ಧರ್ಮಪಾಲ್ ಮತ್ತು ಸಾಮಾಜಿಕ ಕಾರ್ಯಕರ್ತ ಜಯಕುಮಾರ ಹಿರೇಮಠ್ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿತು.   ಜಾಹೀರಾತಿಗೆ ಧೋನಿ ಹಣ ಪಡೆದಿಲ್ಲ ಎಂದು ದೋನಿ ವಕೀಲರು ಹೇಳಿದ್ದರು.  ಹಾಗಿದ್ದರೆ ಪ್ರಮಾಣಪತ್ರ ಸಲ್ಲಿಸಿ ಎಂದು ನ್ಯಾಯಾಧೀಶರು ಕೇಳಿದರು. 
 
ಈ ಸೆಲೆಬ್ರಿಟಿಗಳ ಹಿಂದೆ ಜನರೂ ಬೀಳುತ್ತಾರೆ. ಇವರೂ ಸುಲಭವಾಗಿ ಹಣ ಗಳಿಸಲು ಇಂತಹ ಕೆಲಸ ಮಾಡುತ್ತಾರೆ. ಆದರೆ ಜನರು ಮೂಕ ಪ್ರೇಕ್ಷಕರ ಹಾಗೆ ಸೆಲಿಬ್ರಿಟಿಗಳನ್ನು ಅನುಸರಿವುದರಿಂದ ಅವರು ಹಾಗೆ ಮಾಡುವುದು ಸರಿಯಲ್ಲ ಎಂದು  ಧೋನಿಗೆ ನ್ಯಾಯಮೂರ್ತಿ ವೇಣುಗೋಪಾಲ ಗೌಡ ತರಾಟೆಗೆ ತೆಗೆದುಕೊಂಡರು.  
 ಬ್ಯುಸಿನೆಸ್ ಟುಡೇ ಪತ್ರಿಕೆಯಲ್ಲಿ ಈ ಭಾವಚಿತ್ರ ಪ್ರಕಟವಾಗಿತ್ತು. ಧೋನಿಗೆ  ಹೈಕೋರ್ಟ್ ಹಾಜರಾತಿಯಿಂದ ವಿನಾಯಿತಿ ನೀಡಿದ್ದರಿಂದ ಅವರ ವಕೀಲರು ಕೋರ್ಟ್‌ಗೆ ಹಾಜರಾಗಿದ್ದರು. 

ವೆಬ್ದುನಿಯಾವನ್ನು ಓದಿ