ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಆಸೀಸ್-ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಮಳೆ ಅಡ್ಡಿ

ಶುಕ್ರವಾರ, 2 ಜೂನ್ 2017 (16:41 IST)
ಬರ್ಮಿಂಗ್ ಹ್ಯಾಮ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಭಾರೀ ಕಾಳಗ ನಿರೀಕ್ಷೆ ಹೊಂದಿದ್ದ ಕ್ರಿಕೆಟ್ ಪ್ರಿಯರಿಗೆ ಮಳೆ ತಣ್ಣೀರೆರಚಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಣ ಪಂದ್ಯ ಮಳೆಯಿಂದಾಗಿ ಸದ್ಯಕ್ಕೆ ಸ್ಥಗಿತಗೊಂಡಿದೆ.

 
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ಅದಕ್ಕೆ ತಕ್ಕುದಾಗಿ ಉತ್ತಮ ಆರಂಭವೂ ದೊರಕಿತು. ಆದರೆ 9 ಓವರ್ ಗಳಿಗೆ 67 ರನ್ ಗಳಿಸಿದ್ದಾಗ ಮಳೆ ಬಂತು.

ಈ ಸಂದರ್ಭದಲ್ಲಿ ಲ್ಯೂಕ್ ರೋಂಚಿ 24 ಮತ್ತು ನಾಯಕ ಕೇನ್ ವಿಲಿಯಮ್ಸ್ 16 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಮಾರ್ಟಿನ್ ಗುಪ್ಟಿಲ್ 26 ರನ್ ಗಳಿಸಿ ಹೇಝಲ್ ವುಡ್ ಗೆ ವಿಕೆಟ್ ಒಪ್ಪಿಸಿದ್ದರು. ಉತ್ತಮ ರನ್ ಸರಾಸರಿ ಕಾಯ್ದುಕೊಂಡಿರುವ ನ್ಯೂಜಿಲ್ಯಾಂಡ್ ಗೆ ಮಳೆ ಅಡ್ಡಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ