ಚಾಂಪಿಯನ್ಸ್ ಟ್ರೋಫಿ ಅನಿಶ್ಚಿತತೆಯಿಂದ ಬಾಂಗ್ಲಾಗೆ ಕಿರಿಕಿರಿ

ಮಂಗಳವಾರ, 30 ಜೂನ್ 2015 (17:17 IST)
ಬಾಂಗ್ಲಾದೇಶಕ್ಕೆ 2017ರ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಪಡೆಯುವುದಕ್ಕೆ ಜಿಂಬಾಬ್ವೆಯಲ್ಲಿ ಹೊಸ ತ್ರಿಕೋನ ಸರಣಿ ಬೆದರಿಕೆಯೊಡ್ಡಿರುವುದರಿಂದ ಬಾಂಗ್ಲಾದೇಶ ಪ್ರಸಕ್ತ ವೇಳಾಪಟ್ಟಿ ವ್ಯವಸ್ಥೆಯನ್ನು ಟೀಕಿಸಿದೆ. 
 
ಬಾಂಗ್ಲಾದೇಶವು 2-1ರಿಂದ  ಗೆಲ್ಲುವ ಮೂಲಕ  ಕಳೆದ ವಾರ ಭಾರತವನ್ನು ಅಚ್ಚರಿಗೊಳಿಸಿತ್ತು. ಈ ಜಯದಿಂದ ಪಾಕಿಸ್ತಾನವನ್ನು 3-0ಯಿಂದ ವಾಷ್ ಔಟ್ ಮಾಡಿದ್ದ ಬಾಂಗ್ಲಾದೇಶ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ 93 ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನಕ್ಕೆ ಜಿಗಿದಿತ್ತು. ವೆಸ್ಟ್ ಇಂಡೀಸ್ 88 ಮತ್ತು ಪಾಕಿಸ್ತಾನದ 87ಕ್ಕಿಂತ ಅದು ಮುಂದಿದೆ. ಅಗ್ರ ಏಳು ತಂಡಗಳು ಮತ್ತು ಆತಿಥೇಯ ಇಂಗ್ಲೆಂಡ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು, ತಂಡಗಳ ಶ್ರೇಯಾಂಕ ನಿರ್ಧರಿಸಲು ಸೆ.30 ಕಟ್‌ಆಫ್ ದಿನಾಂಕ ಆಗಿರುತ್ತದೆ. 
 
ಆದರೆ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶಿಸುವ ಕನಸು ಕಂಡಿದ್ದ ಬಾಂಗ್ಲಾದೇಶದ ವಿಜಯೋತ್ಸವ ಈಗ ಅಪಕ್ವವೆನಿಸಿದೆ. ಕಟ್ ಆಫ್ ದಿನಾಂಕಕ್ಕೆ ಮುಂಚೆ ವೆಸ್ಟ್ ಇಂಡೀಸ್ ಏಕದಿನ ಪಂದ್ಯಗಳನ್ನು ಆಡುವುದು ನಿಗದಿಯಾಗಿರಲಿಲ್ಲ. ಆದರೆ ಶನಿವಾರ ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನವನ್ನು ಒಳಗೊಂಡ ಜಿಂಬಾಬ್ವೆ ತ್ರಿಕೋನ ಸರಣಿಯನ್ನು ಪ್ರಕಟಿಸಿದೆ. ಪಾಕಿಸ್ತಾನಕ್ಕೆ ಕೂಡ ಜುಲೈ 11ರಿಂದ ನಡೆಯುವ ಶ್ರೀಲಂಕಾ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ  ಏಕದಿನದ ಶ್ರೇಯಾಂಕ ಸುಧಾರಣೆಗೆ ಅವಕಾಶ ಸಿಗುತ್ತದೆ.
 
ಆದರೆ ಬಾಂಗ್ಲಾ ದೇಶದ ಕ್ರಿಕೆಟ್ ಮಂಡಳಿ ನಿರ್ದೇಶಕ ಜಲಾಲ್ ಯುನುಸ್ ಈ ಕುರಿತು ಅಸಾಮಾಧಾನ ವ್ಯಕ್ತಪಡಿಸಿದ್ದು, ಐಸಿಸಿ ಎಫ್‌ಟಿಪಿ ಅನುಸರಣೆ ನಿಲ್ಲಿಸಿ ಮಂಡಳಿಗಳಿಗೆ ದ್ವಿಪಕ್ಷೀಯವಾಗಿ ನಿಭಾಯಿಸುವುದನ್ನು ಬಿಟ್ಟಿದ್ದರಿಂದಾಗಿ  ಇಡೀ ವ್ಯವಸ್ಥೆ ತಪ್ಪಾಗಿದೆ ಎಂದು ತಿಳಿಸಿದ್ದಾರೆ. 
 
ಇದು ಲೋಪದೋಷಗಳನ್ನು ಸೃಷ್ಟಿಸಿದ್ದು, ನಾನು ಇದಕ್ಕೆ ಬೆಂಬಲಿಸುವುದಿಲ್ಲ. ಇದೊಂದು ಅನಾರೋಗ್ಯಕರ ಸ್ಪರ್ಧೆ ಎಂದು ಜಲಾಲ್ ಹೇಳಿದರು. 
ಬಾಂಗ್ಲಾದೇಶ ಈಗ ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದ ಸರಣಿಯಲ್ಲಿ ಮೂರು ಏಕದಿನಗಳ ಪೈಕಿ ಕನಿಷ್ಠ ಒಂದು ಪಂದ್ಯವನ್ನು ಗೆಲ್ಲಬೇಕಾಗುತ್ತದೆ.
 

ವೆಬ್ದುನಿಯಾವನ್ನು ಓದಿ