ಭಾರತ ಎ ತಂಡದಲ್ಲಿ ಉನ್‌ಮುಕ್ತ್ ಚಂದ್ ತ್ರಿಕೋನ ಸರಣಿಗೆ, ರಾಯುಡು ಟೆಸ್ಟ್‌ಗೆ ನಾಯಕ

ಶನಿವಾರ, 1 ಆಗಸ್ಟ್ 2015 (16:45 IST)
ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿ ಚೆನ್ನೈನಲ್ಲಿ ಇಂದು ಭೇಟಿ ಮಾಡಿ ಆಸ್ಟ್ರೇಲಿಯಾ ಎ ಮತ್ತು ದಕ್ಷಿಣ ಆಫ್ರಿಕಾ ಎ ಒಳಗೊಂಡ ತ್ರಿಕೋನ ಸರಣಿಗೆ ಭಾರತ ಎ ತಂಡವನ್ನು ಆಯ್ಕೆ ಮಾಡಿದೆ.  ದಕ್ಷಿಣ ಆಫ್ರಿಕಾ ಎ ತಂಡದ ಜೊತೆ ಎರಡು ಅನಧಿಕೃತ ಟೆಸ್ಟ್‌ಗಳಿಗೆ ಕೂಡ ಅದು ತಂಡವನ್ನು ಹೆಸರಿಸಿದೆ.

 ತ್ರಿಕೋನ ಸರಣಿಯಲ್ಲಿ ಭಾರತ ಎ ತಂಡದ ನಾಯಕತ್ವವನ್ನು ಉನ್‌ಮುಕ್ತ್ ಚಾಂದ್ ವಹಿಸಿದರೆ, ಎರಡು ನಾಲ್ಕು ದಿನದ ಪಂದ್ಯಗಳಿಗೆ ಅಂಬಾಟಿ ರಾಯುಡು ಅವರನ್ನು ನಾಯಕನನ್ನಾಗಿ ಹೆಸರಿಸಲಾಗಿದೆ.
 
ತ್ರಿಕೋನ ಸರಣಿಯು ಚೆನ್ನೈನಲ್ಲಿ ಆಗಸ್ಟ್ 5ರಿಂದ ಆಗಸ್ಟ್ 14ರವರೆಗೆ ನಡೆಯಲಿದೆ. ಎರಡೂ ಅನಧಿಕೃತ ಟೆಸ್ಟ್ ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ವಿರುದ್ಧ ಕೇರಳದ ವಾಯನಾಡ್‌ನಲ್ಲಿ ಆಡಲಾಗುತ್ತದೆ.  ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 18ರಿಂದ 21 ಮತ್ತು ಎರಡನೇ ಪಂದ್ಯ ಆಗಸ್ಟ್ 25ರಿಂದ 28.  ಭಾರತ ಎ ತಂಡ ಇತ್ತೀಚೆಗೆ ಎರಡು ಪಂದ್ಯಗಳ ಸರಣಿಯನ್ನು ಸೋತಿತು.  ಮೊದಲ ಪಂದ್ಯ ಡ್ರಾನಲ್ಲಿ ಕೊನೆಯಾದರೂ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಎ ಆತಿಥೇಯರನ್ನು 10 ವಿಕೆಟ್‌ಗಳಿಂದ ಸೋಲಿಸಿತು. 
 
ಭಾರತ ತ್ರಿಕೋನ ಸರಣಿಯಲ್ಲಿ ಎ ತಂಡಕ್ಕಾಗಿ: ಉನ್ಮುಕ್ತ್ ಚಂದ್ (ನಾಯಕ), ಮಾಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಕರುಣ್ ನಾಯರ್ (ವಿಸಿ), ಕೇದಾರ್ ಜಾಧವ್, ಸಂಜು ಸ್ಯಾನ್ಸನ್, ಅಕ್ಸರ್ ಪಟೇಲ್, ಪರ್ವೇಜ್ ರಸೂಲ್, ಕರಣ್ ಶರ್ಮಾ ಧವಳ್ ಕುಲಕರ್ಣಿ, ಸಂದೀಪ್ ಶರ್ಮಾ, ರಷ್ ಕಲಾರಿಯಾ ಮನ್ದೀಪ್ ಸಿಂಗ್, ಗುರ್‌ಕೀರತ್ ಸಿಂಗ್ ಮನ್, ರಿಷಿ ಧವನ್.
 
ಭಾರತ ಟೆಸ್ಟ್ ಎ ತಂಡ: ಅಂಬಾಟಿ ರಾಯುಡು (ಸಿ), ಕರುಣ್ ನಾಯರ್ (ವಿಸಿ), ಅಭಿನವ್ ಮುಕುಂದ್, ಅಂಕುಶ್ ಬೈನ್ಸ್ , ಶ್ರೇಯಸ್ ಅಯ್ಯರ್, ಬಾಬಾ ಅಪರಾಜಿತ್, ವಿಜಯ್ ಶಂಕರ್, ಜಯಂತ್ ಯಾದವ್ ,ಅಕ್ಸರ್  ಪಟೇಲ್,  ಕರಣ್ ಶರ್ಮಾ, ಅಭಿಮನ್ಯು ಮಿಥುನ್, ಶ್ರಾದುಲ್ ಠಾಕೂರ್, ಈಶ್ವರ್ ಪಾಂಡೆ , ಶೆಲ್ಡನ್ ಜಾಕ್ಸನ್, ಜೀವನ್ಜೋತ್ ಸಿಂಗ್.

ವೆಬ್ದುನಿಯಾವನ್ನು ಓದಿ