ವಿಶ್ವ ಟಿ20 ಪಂದ್ಯ ಚೆನ್ನೈನಲ್ಲಿ ಕೂಡ ನಡೆಯುವ ಸಾಧ್ಯತೆ

ಬುಧವಾರ, 1 ಜುಲೈ 2015 (19:55 IST)
ಚೆನ್ನೈ ಕ್ರಿಕೆಟ್ ಅಭಿಮಾನಿಗಳು ನಿಟ್ಟುಸಿರು ಬಿಡುವಂತಹ ಸಂಗತಿ ವರದಿಯಾಗಿದ್ದು, ಚೆನ್ನೈನಲ್ಲಿ ಕೂಡ ವಿಶ್ವ ಟಿ 20 ಪಂದ್ಯವನ್ನು ಆಡಿಸಲಾಗುತ್ತದೆ. ಚೀಪಾಕ್‌ನ ಮೂರು ಸ್ಟಾಂಡ್‌ಗಳಾದ ಜಿ, ಎಚ್ ಮತ್ತು ಐಗೆ ಪರಿಸರ ಅನುಮತಿ ಸಿಗುವಲ್ಲಿ ವಿಳಂಬವಾಗಿದ್ದರಿಂದ ಟಿ20 ಪಂದ್ಯ ನಗರದಿಂದ ಹೊರಗೆ ಹೋಗುವ ಸಂಭವವಿತ್ತು.

ಆದರೆ ಐಸಿಸಿಯ ಇತ್ತೀಚೆಗೆ ಮುಗಿದ ವಾರ್ಷಿಕ ಸಭೆಯಲ್ಲಿ ಚೆನ್ನೈನಲ್ಲಿ ಟಿ20 ಆಡಿಸುವ ಬಗ್ಗೆ ಕೂಡ ಚರ್ಚಿಸಲಾಗಿದ್ದು ಪರಿಸರ ಅನುಮತಿ ಪಡೆಯಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ಎಲ್ಲಾ ಪ್ರಯತ್ನ ಮಾಡುತ್ತಿರುವುದಾಗಿ ಬಿಸಿಸಿಐ ಮತ್ತು ಐಸಿಸಿಗೆ ತಿಳಿಸಲಾಗಿದೆ. 
 
ಮದ್ರಾಸ್ ಕ್ರಿಕೆಟ್ ಕ್ಲಬ್ ಜಿಮ್ನಾಶಿಯಂ ಭಾಗವನ್ನು ಒಡೆದು ಸ್ಟಾಂಡ್‌ಗಳು ಮತ್ತು ಮುಂದಿನ ಕಟ್ಟಡದ ನಡುವೆ 8 ಮೀಟರ್ ಜಾಗವನ್ನು ಬಿಡಬೇಕು. ಟಿ20 ವಿಶ್ವಕಪ್‌‌ಗೆ ಮುನ್ನವೇ ಇದನ್ನು ನೆರವೇರಿಸುವ ಭರವಸೆ ನೀಡಲಾಗಿದೆ. ಆದ್ದರಿಂದ ಚೆನ್ನೈ ಕೂಡ ಪಟ್ಟಿಯಲ್ಲಿರುತ್ತದೆ ಎಂದು ಬಿಸಿಸಿಐ ಮೂಲವೊಂದು ಹೇಳಿದೆ. 
 
 ಬಿಸಿಸಿಐ ತನ್ನ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೂ ವಿಶ್ವ ಟಿ 20ಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ಮಂಡಳಿಯ ಸದಸ್ಯರು ಒಟ್ಟಾಗಿ ಕೆಲಸ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ