ಚೆನ್ನೈ ಸೂಪರ್ ಕಿಂಗ್ಸ್ ನಿಜ ಮೌಲ್ಯ 1140 ಕೋಟಿ, 7.83 ಕೋಟಿಯಲ್ಲ: ಅನುರಾಗ್ ಠಾಕುರ್

ಮಂಗಳವಾರ, 15 ಸೆಪ್ಟಂಬರ್ 2015 (20:24 IST)
ಐಪಿಎಲ್‌ನ ಅಮಾನತುಗೊಂಡ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ನ ಮೌಲ್ಯ 1140 ಕೋಟಿಗಳಾಗಿವೆ. ಆದರೆ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್  ಫ್ರಾಂಚೈಸಿಯನ್ನು ಟ್ರಸ್ಟೊಂದಕ್ಕೆ ಕೇವಲ 7.83 ಕೋಟಿ ರೂ.ಗೆ ವರ್ಗಾಯಿಸಿದರು ಎಂದು  ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ 40 ಪುಟಗಳ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 
 
 ಸಿಎಸ್‌ಕೆ ಬ್ರಾಂಡ್ ಮೌಲ್ಯವು 455 ಕೋಟಿ ರೂ. ಎಂಬ ಅಮೆರಿಕದ ಅಪ್ರೈಸಲ್ ವರದಿಯನ್ನು ಆಧರಿಸಿ ಠಾಕುರ್ ಮೌಲ್ಯಮಾಪನ ಮಾಡಿದ್ದಾರೆ. ಬ್ರಾಂಡ್ ಮೌಲ್ಯವು ಶೇ. 40ರಷ್ಟಿದ್ದರೆ, ಅದರ ಅರ್ಥ ಇಡೀ ಫ್ರಾಂಚೈಸಿಯು 1140 ಕೋಟಿ ಮೌಲ್ಯವುಳ್ಳದ್ದಾಗಿದೆ ಎಂದು ಠಾಕುರ್ 2014ರ ಫೆಬ್ರವರಿಯ ಆಡಿಟ್ ಉಲ್ಲೇಖಿಸಿ ಹೇಳಿದ್ದಾರೆ. 
 
 ವರ್ಗಾವಣೆ ನಡೆದಾಗ 8 ಕೋಟಿ ರೂ.ಗಿಂತ ಕಡಿಮೆ ಮೌಲ್ಯಕ್ಕೆ ವ್ಯವಹಾರ ಪೂರ್ಣಗೊಂಡಿದೆ ಎಂದು ಮುಂಬೈ ಷೇರು ಪೇಟೆಗೆ ತಿಳಿಸಲಾಯಿತು. ಆದರೆ ಸಿಎಸ್‌ಕೆ ಅತೀ ಕಡಿಮೆ ದರಕ್ಕೆ ವರ್ಗಾಯಿಸಿದ್ದರಿಂದ  ನಿಜವಾದ ಮೌಲ್ಯದ ಶೇ. 5ರಷ್ಟು ಷೇರು ಹಣದ ಸೌಲಭ್ಯದಿಂದ ಬಿಸಿಸಿಐ ವಂಚಿತವಾಯಿತು ಠಾಕುರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ