ಡೇರ್ ಡೆವಿಲ್ಸ್ ವಿರುದ್ಧ ಒಂದು ರನ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಜಯ

ಶುಕ್ರವಾರ, 10 ಏಪ್ರಿಲ್ 2015 (10:01 IST)
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ಚೆನ್ನೈನ ಚಿದಂಬರಂ ಮೈದಾನದಲ್ಲಿ  ನಡೆದ ಐಪಿಎಲ್ 2105ರ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್  ಕೇವಲ ಒಂದು ರನ್‌ನಿಂದ ರೋಚಕ ಗೆಲುವನ್ನು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. 151 ರನ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ  ಡೇರ್ ಡೆವಿಲ್ಸ್  ದಕ್ಷಿಣ ಆಫ್ರಿಕಾದ ಮಾರ್ಕೆಲ್  ಅವರ ಅಜೇಯ 73 ರನ್ ನೆರವಿನಿಂದ ಗೆಲುವಿಗೆ ಅತೀ ಸಮೀಪದಲ್ಲಿತ್ತು.


ಕೊನೆಯ ಎಸೆತದಲ್ಲಿ ಮಾರ್ಕೆಲ್‌ಗೆ 6 ರನ್‌ಗಳು ಅಗತ್ಯವಿತ್ತು. ಆದರೆ ಎಡಗೈ ಆಟಗಾರ ಬೌಂಡರಿ ಹೊಡೆಯುವಲ್ಲಿ ಮಾತ್ರ ಯಶಸ್ವಿಯಾಗಿ ಒಟ್ಟು 149 ರನ್ ಗಳಿಸಿದ್ದರಿಂದ ಚೆ
ನ್ನೈಗೆ 1 ರನ್ ಅಂತರದಿಂದ ಸೋಲಪ್ಪಿತು. 
 
 ಡೇರ್ ಡೆವಿಲ್ಸ್ ರನ್ ಚೇಸ್‌ನಲ್ಲಿ ಬೇಗನೇ ಆರಂಭದ ವಿಕೆಟ್‌ಗಳನ್ನು ಕಳೆದುಕೊಂಡಿತು. ಆಶಿಶ್ ನೆಹ್ರಾ ತಮ್ಮ ಬುದ್ಧಿವಂತಿಕೆಯ ಬೌಲಿಂಗ್‌ನಿಂದ ಮೊದಲ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆದರೆ  ಕೇದಾರ್ ಯಾದವ್ ಅವರ ವಿವೇಚನೆಯ ಬ್ಯಾಟಿಂಗ್ ನೆರವಿನಿಂದ ಚೇತರಿಸಿಕೊಂಡಿತು. ಮಾರ್ಕೆಲ್ ಜೊತೆ ನಾಲ್ಕನೇ ವಿಕೆಟ್‌ಗೆ 48 ರನ್ ಜೊತೆಯಾಟದ ಮೂಲಕ ಡೇರ್ ಡೆವಿಲ್ಸ್ ಇನ್ನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. 14ನೇ ಓವರಿನಲ್ಲಿ ಯಾದವ್ ಔಟಾದ ಬಳಿಕ ಈ ಬಾರಿ ಐಪಿಎಲ್ ಅತೀ ದುಬಾರಿ ಆಟಗಾರ ಯುವರಾಜ್ ಸಿಂಗ್ ಕೇವಲ 9 ರನ್ ಗಳಿಸಿ ಪುಲ್ ಶಾಟ್ ಹೊಡೆಯಲು ಯತ್ನಿಸಿ ಔಟಾದರು.

ಡೇರ್ ಡೇವಿಲ್ಸ್ ಗೆಲ್ಲುವ ಆಸೆ ಸಂಪೂರ್ಣ ಮಾರ್ಕೆಲ್ ಹೆಗಲ ಮೇಲೆ ಬಿದ್ದಿತ್ತು. ಅವರು ತಮ್ಮ ತಂಡವನ್ನು ವಿಜಯದ ಅಂಚಿನಲ್ಲಿ ತಂದು ನಿಲ್ಲಿಸಿದ್ದರು. ಆದರೆ ಕೊನೆಯಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸುವ ಜಯವನ್ನು ತಂಡಕ್ಕೆ ತರುವಲ್ಲಿ ವಿಫಲರಾದರು. ದೆಹಲಿಗೆ ಚೆನ್ನೈ ಸ್ಕೋರನ್ನು ಸುಲಭವಾಗಿ ಬೆನ್ನಟ್ಟಿ ಗೆಲ್ಲುವ ಅವಕಾಶವಿತ್ತು. ಆದರೆ  ಯುವರಾಜ್ ಸಿಂಗ್ , ಡುಮಿನಿ ಮುಂತಾದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಔಟಾಗಿದ್ದು ಕೂಡ ಡೆಲ್ಲಿ ಸೋಲಿಗೆ ಕಾರಣವಾಯಿತು. 
 
ಮೊದಲಿಗೆ ಬ್ಯಾಟಿಂಗ್ ಮಾಡಿದ ಚೆನ್ನೈ ಧೋನಿ ಅವರ 30 ರನ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಅಜೇಯ 12 ರನ್ ನೆರವಿನಿಂದ 151
ಮೊತ್ತವನ್ನು ಕಲೆಹಾಕಿತು. ಆರಂಭದಲ್ಲಿ ನ್ಯೂಜಿಲೆಂಡ್ ವಿಶ್ವಕಪ್ ಹೀರೋ ಮೆಕಲಮ್ ಕೇವಲ 4 ರನ್‌ಗೆ ಔಟಾದ ಬಳಿಕ ಚೆನ್ನೈ ತಂಡ ಕುಸಿತದ ಹಾದಿ ಹಿಡಿಯಿತು. ಸುರೇಶ್ ರೈನಾ ಕೂಡ ಹೆಚ್ಚು ಹೊತ್ತು ನಿಲ್ಲದೇ 4 ರನ್‌ಗೆ ಔಟಾದರು.

ಡೆಲ್ಲಿಯ ಬಿಗಿ ಬೌಲಿಂಗ್‌ನಿಂದಾಗಿ ಚೆನ್ನೈ ಸ್ಕೋರ್ ವೇಗ ಇಳಿಯಿತು. 13ನೇ ಓವರಿನಲ್ಲಿ 11 ರನ್ ಸ್ಕೋರ್ ಮಾಡಿದ ಬಳಿಕ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ಕಡೆಯಲ್ಲಿ ಧೋನಿಯ ಎರಡು ಸಿಕ್ಸರ್ ನೆರವಿನಿಂದ 150 ರನ್ ಸಾಧಾರಣ  ಮೊತ್ತವನ್ನು ಚೆನ್ನೈ ಕಲೆಹಾಕಿತು.
ಡೆಲ್ಲಿ ಪರ ನಾಥನ್ ಕೋಲ್ಟರ್ ನೈಲ್ ಮೂರು ವಿಕೆಟ್ ಕಬಳಿಸಿದರೆ ಇಮ್ರಾನ್ ತಾಹಿರ್, ಅಮಿತ್ ಮಿಶ್ರಾ, ಡುಮಿನಿ ಮತ್ತು ಡೋಮಿನಿಕ್ ಜೋಸೆಫ್ ತಲಾ ಒಂದು ವಿಕೆಟ್ ಕಬಳಿಸಿದರು. 

ವೆಬ್ದುನಿಯಾವನ್ನು ಓದಿ