ಕ್ರಿಸ್ ಗೇಲ್ 138 ಎಸೆತಗಳಲ್ಲಿ ಅತೀ ವೇಗದ ದ್ವಿಶತಕದ ಸಾಧನೆ

ಮಂಗಳವಾರ, 24 ಫೆಬ್ರವರಿ 2015 (12:33 IST)
ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಮತ್ತೆ ಫಾರಂಗೆ ಮರಳಿದ್ದಾರೆ.

ಕಳೆದ 19 ತಿಂಗಳಿಂದ ಗೇಲ್ ಒಂದೇ ಒಂದು ಸೆಂಚುರಿಯನ್ನೂ ಗಳಿಸಿರಲಿಲ್ಲ. ಕ್ರಿಸ್ ಗೇಲ್ ದ್ವಿಶತಕದಿಂದ ವೆಸ್ಟ್ ಇಂಡೀಸ್ ತಂಡದಲ್ಲಿ ಮತ್ತೆ ಚೈತನ್ಯ ಮೂಡಿದೆ.  ಈ ಸ್ಕೋರಿನಿಂದಾಗಿ ದ್ವಿಶತಕ ಬಾರಿಸಿದ ನಾಲ್ಕನೇ ಆಟಗಾರನಾಗಿ ಗೇಲ್ ಸಾಧನೆ ಮಾಡಿದ್ದಾರೆ ಮತ್ತು ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ರನ್ ದಾಖಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 
 
ಏಕ ದಿನ ಪಂದ್ಯಗಳಲ್ಲಿ ಇದು ಅತೀ ವೇಗದ ದ್ವಿಶತಕವಾಗಿದ್ದು, ವೀರೇಂದ್ರ ಸೆಹ್ವಾಗ್ ಅವರ 140 ಎಸೆತಗಳಲ್ಲಿ ದ್ವಿಶತಕದ ವೇಗವನ್ನು ಮೀರಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಬಳಿಕ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ನಾಲ್ಕನೇ ಆಟಗಾರನ ಸಾಲಿಗೆ ಕ್ರಿಸ್ ಗೇಲ್ ಸೇರಿದರು. ಗೇಲ್ ದ್ವಿಶತಕದಲ್ಲಿ 9 ಬೌಂಡರಿಗಳು ಮತ್ತು 16 ಸಿಕ್ಸರುಗಳಿದ್ದವು.

ವೆಸ್ಟ್ ಇಂಡೀಸ್ ಮೊದಲಿಗೆ ಬ್ಯಾಟಿಂಗ್ ಆಡುತ್ತಿದ್ದು, 1 ವಿಕೆಟ್ ಕಳೆದುಕೊಂಡು 356 ರನ್ ಬೃಹತ್ ಮೊತ್ತದೊಂದಿಗೆ ಆಡುತ್ತಿದೆ.  ಕ್ರಿಸ್ ಗೇಲ್ 215 ರನ್ ಮಾಡಿ ಔಟಾಗಿದ್ದಾರೆ  ಮತ್ತು ಸ್ಯಾಮ್ಯುಯಲ್ಸ್ 125 ರನ್‌ಗಳೊಂದಿಗೆ ಆಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ