ಬೆಂಗಳೂರಿನಲ್ಲಿ ಫೇಮಸ್ ಕ್ಲಬ್‌ನಲ್ಲಿ ಡಿಜೆಯಾದ ಕ್ರಿಸ್ ಗೇಲ್

ಸೋಮವಾರ, 20 ಏಪ್ರಿಲ್ 2015 (18:50 IST)
ಕಳೆದ ಶುಕ್ರವಾರ ರಾತ್ರಿ ಯುವತಿಯರಿಗೆ ರೋಮಾಂಚನ ಕಾದಿತ್ತು. ರಾಯಲ್ ಚಾಲೆಂಜರ್ಸ್ ತಂಡದ ಪ್ರಬಲ ಬ್ಯಾಟ್ಸ್‌ಮೆನ್ ಕ್ರಿಸ್ ಗೇಲ್‌ ಎಲ್ಲರ ಗಮನ ಸೆಳೆದಿದ್ದರು. ನಗರದ ಪ್ರಮುಖ ಕ್ಲಬ್‌ನಲ್ಲಿ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಡಿಜೆಯಾಗಿ ಕಾರ್ಯನಿರ್ವಹಿಸಿ ಹೊಸತೊಂದು ಕಳೆಯನ್ನು ತಂದಿದ್ದರು.  

ಕ್ರಿಸ್ ಗೇಲ್ ಡ್ರಿಂಕ್ಸ್‌ಗಳನ್ನು ಮಿಕ್ಸ್ ಮಾಡುತ್ತಾ ಯುವತಿಯರನ್ನು ಆಕರ್ಷಿಸುತ್ತಿದ್ದರು. ತಮ್ಮ ವೈಯಕ್ತಿಕ ಫೆವರೇಟ್‌‍ಗಳ ಬಗ್ಗೆ ಮಾತನಾಡಿದ ಅವರು, ಬೀಚ್‌ನಲ್ಲಿ ಸೆಕ್ಸ್ ಮಾಡುವುದು ನನಗೆ ತುಂಬಾ ಇಷ್ಟದ ಸಂಗತಿ ಎಂದರು.

ಮಹಿಳಾ ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಗೇಲ್ ಎಲ್ಲರೊಂದಿಗೆ ಸಂತಸದಿಂದ ಸಮಯ ಕಳೆದರು. ಕ್ಲಬ್‌ನಲ್ಲಿ ಹಾಡು ಹಾಡುತ್ತಾ ಡ್ರಿಂಕ್ಸ್ ಸವಿಯುತ್ತಾ ಹೊಸತೊಂದು ಲೋಕವನ್ನೇ ಸೃಷ್ಟಿಸಿದರು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ