ವಿಶ್ವಕಪ್ ಗೆಲುವನ್ನು ಫಿಲಿಪ್ ಹ್ಯೂಸ್‌ಗೆ ಮುಡುಪಾಗಿಟ್ಟ ಮೈಕೇಲ್ ಕ್ಲಾರ್ಕ್

ಸೋಮವಾರ, 30 ಮಾರ್ಚ್ 2015 (16:18 IST)
ಆಸ್ಟ್ರೇಲಿಯಾ ನಾಯಕ ಮೈಕೇಲ್ ಕ್ಲಾರ್ಕ್ ಭಾನುವಾರ ತಮ್ಮ ವಿಶ್ವಕಪ್ ಗೆಲುವನ್ನು ಮೃತ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಅವರಿಗೆ ಮುಡುಪಾಗಿಟ್ಟಿದ್ದಾರೆ.  ದೇಶೀ ಪಂದ್ಯದಲ್ಲಿ ಬೌನ್ಸರ್ ಚೆಂಡು ಫಿಲಿಪ್ ಹ್ಯೂಸ್  ತಲೆಗೆ ಬಡಿದು ಎರಡು ದಿನಗಳ ನಂತರ  ದಾರುಣವಾಗಿ ಮೃತರಾಗಿದ್ದರಿಂದ ಇಡೀ ಆಸೀಸ್ ಟೀಂ ಶೋಕಸಾಗರದಲ್ಲಿ ಮುಳುಗಿತ್ತು.

 ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು,  ಪಿಎಚ್ ಎಂದು ಕೆತ್ತಿದ ಕಪ್ಪುಪಟ್ಟಿಯನ್ನು ತಾವು ಧರಿಸಿರುವುದನ್ನು ಮುಂದುವರಿಸುವುದಾಗಿ ಮತ್ತು ಎಡಗೈ ಆಟಗಾರನಿಗೆ ವಿಶ್ವಕಪ್ ಮುಡಿಪಾಗಿಡುವುದಾಗಿ ತಿಳಿಸಿದರು.  ಹ್ಯೂಸ್ ಅವರು 26 ಟೆಸ್ಟ್ ಪಂದ್ಯಗಳಲ್ಲಿ 25 ಏಕದಿನ ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಪ್ರತಿನಿಧಿಸಿದ್ದರು. ನಾನು ಪ್ರತಿಬಾರಿ ಆಸೀಸ್ ಪರ ಆಡುವಾಗ ಈ ಕಪ್ಪುಬ್ಯಾಂಡ್ ಧರಿಸುತ್ತೇನೆ.

ಇಂದಿನ ರಾತ್ರಿಯ ಗೆಲುವನ್ನು  ನಾನು ನನ್ನ ಸಹೋದರ ಫಿಲ್ ಹ್ಯೂಸ್ ಅವರಿಗೆ ಮುಡಿಪಾಗಿಟ್ಟಿದ್ದೇನೆ ಎಂದು ಕ್ಲಾರ್ಕ್ ಹೇಳಿದರು. ನಾಯಕ ಕ್ಲಾರ್ಕ್ ಅವರಿಗೆ ಇದು ವಿದಾಯದ ಪಂದ್ಯವಾಗಿದ್ದು, ನ್ಯೂಜಿಲೆಂಡ್ ಪಂದ್ಯಾವಳಿಯುದ್ದಕ್ಕೂ ಸೋಲಿಸಲು ಕಠಿಣ ತಂಡವಾಗಿತ್ತು ಎಂದು ಶ್ಲಾಘಿಸಿದ್ದಾರೆ.  ಮೆಕಲಮ್ ಮತ್ತು ನ್ಯೂಜಿಲೆಂಡ್ ಅತ್ಯಂತ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರು ಸದಾ ಸೋಲಿಸಲು ಕಠಿಣ ತಂಡವಾಗಿದೆ ಎಂದು ಹೊಗಳಿದರು.  ಟ್ರೋಫಿಯನ್ನು ಗೆದ್ದಾಗ ಯಾವ ಭಾವನೆ ಉಂಟಾಗಿದೆ ಎಂದು ಕೇಳಿದಾಗ, ತಾವು ಚಂದ್ರಲೋಕಕ್ಕೆ ಹೋದ ಹಾಗೆ ಭಾಸವಾಗುತ್ತಿದ್ದು, ತಾವು ಚಾಂಪಿಯನ್ ಪಟ್ಟಕ್ಕೆ ಅರ್ಹರೆಂದು ನಂಬಿರುವುದಾಗಿ ತಿಳಿಸಿದರು. 

ವೆಬ್ದುನಿಯಾವನ್ನು ಓದಿ