ಭಾರತದ ಕೋಚಿಂಗ್ ಹುದ್ದೆ ಯಾರ ಕೊರಳಿಗೆ? ಕುಂಬ್ಳೆ ಅಥವಾ ರವಿ ಶಾಸ್ತ್ರಿಯತ್ತ ಬಿಸಿಸಿಐ ಚಿತ್ತ

ಮಂಗಳವಾರ, 14 ಜೂನ್ 2016 (14:12 IST)
ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಹುದ್ದೆಗೆ ಬಿಸಿಸಿಐ ಜಾಹಿರಾತು ಪ್ರಕಟಿಸಿದ ಕೂಡಲೇ ಕ್ರಿಕೆಟ್ ಘಟಾನುಘಟಿಗಳಿಂದ ಅರ್ಜಿಗಳು ಹರಿದುಬಂದವು. ಅರ್ಜಿ ಸಲ್ಲಿಸಿದವರಲ್ಲಿ ರವಿ ಶಾಸ್ತ್ರಿ ಅತೀ ಪ್ರಮುಖ ಹೆಸರಾಗಿದ್ದು, ಸಂದೀಪ್ ಪಾಟೀಲ್ ಕೂಡ ಕೋಚ್ ಹುದ್ದೆಯಲ್ಲಿ ಆಸಕ್ತಿ ತೋರಿಸಿದ್ದಾರೆ. 
 
ಆದರೆ ಬಿಸಿಸಿಐ ಅನಿಲ್ ಕುಂಬ್ಳೆ ಕೂಡ ಅಖಾಡಕ್ಕೆ ಇಳಿದಿದ್ದಾರೆಂದು ದೃಢಪಡಿಸಿದ ಬಳಿಕ   ಸೋಮವಾರದಿಂದ ಪರಿಸ್ಥಿತಿ ಬದಲಾವಣೆಯಾಗಿದೆ. ಪ್ರಸಕ್ತ ಐಸಿಸಿ ಅಧ್ಯಕ್ಷರಾಗಿರುವ ಅನಿಲ್ ಕುಂಬ್ಳೆ ಬಿಸಿಸಿಐಗೆ ತಮ್ಮ ಅರ್ಜಿಯನ್ನು ಈ ಮೇಲ್ ಮೂಲಕ ಕಳಿಸಿದ್ದಾರೆ.
 
ಮಾಜಿ ಲೆಗ್ ಸ್ಪಿನ್ ಬೌಲರ್ ಅತ್ಯಂತ ಖ್ಯಾತ ಲೆಜಂಡ್ ಆಗಿದ್ದು, ಟೀಂ ಇಂಡಿಯಾಗೆ ಅವರಂತಹ ಕೋಚ್ ಸಿಕ್ಕಿದರೆ ಅದೇ ಪುಣ್ಯವಾಗಿದೆ.  ಜಂಬೊ ಎಂದು ಪ್ರೀತಿಯಿಂದ ಕರೆಯಲಾಗುತ್ತಿದ್ದ ಕುಂಬ್ಳೆ, 132 ಟೆಸ್ಟ್ ಪಂದ್ಯಗಳನ್ನು ಮತ್ತು 271 ಏಕದಿನ ಪಂದ್ಯಗಳನ್ನು ಆಡಿದ್ದು, ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್‌‍ಗಳನ್ನು ಮತ್ತು  ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಕಬಳಿಸಿದ್ದಾರೆ.
 
ಆದರೆ ಇನ್ನೊಂದು ಕಡೆಯಲ್ಲಿ ಭಾರತ ಕ್ರಿಕೆಟ್ ತಂಡದ ಜತೆ ರವಿ ಶಾಸ್ತ್ರಿ ಟೀಂ ಡೈರೆಕ್ಟರ್ ಆಗಿ ಕಳೆದ ಕಾಲಾವಧಿಯಿಂದ ಮಂಡಳಿ ಶಾಸ್ತ್ರಿ ಹೆಸರನ್ನು ತಳ್ಳಿಹಾಕುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವರ ಕಾಲಾವಧಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ.
ಇವರ ಜತೆಗೆ ವೆಂಕಟೇಶ್ ಪ್ರಸಾದ್, ಪ್ರವೀಣ್ ಆಮ್ರೆ, ಸಾಂಧು, ಸುರೇಂದ್ ಭಾವೆ, ಕಾನಿಟ್ಕರ್ ಕೂಡ ಕೋಚ್ ಹುದ್ದೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅನೇಕ ಹೆಸರುಗಳ ನಡುವೆ ಒಂದನ್ನು ಆಯ್ಕೆಮಾಡಬೇಕಾದ ಪರಿಸ್ಥಿತಿಗೆ ಸಿಕ್ಕಿಬಿದ್ದಿರುವ ಬಿಸಿಸಿಐ ಶಾಸ್ತ್ರಿ ಮತ್ತು ಕುಂಬ್ಳೆಯತ್ತ ಚಿತ್ತವನ್ನು ನೆಟ್ಟಿದೆ. ಶಾಸ್ತ್ರಿ ಅಥವಾ ಕುಂಬ್ಳೆ ಇಬ್ಬರಲ್ಲಿ ಯಾರನ್ನು ಆಯ್ಕೆಮಾಡುತ್ತಾರೆಂದು ಕಾದು ನೋಡಬೇಕು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ