ಸೆಮಿಫೈನಲ್ ಪಂದ್ಯಕ್ಕೆ ಮಿಥಾಲಿ ರಾಜ್ ರನ್ನು ಕೈಬಿಟ್ಟು ವಿವಾದಕ್ಕೀಡಾದ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್
ಮಹತ್ವದ ಪಂದ್ಯಕ್ಕೆ ಫಾರ್ಮ್ ನಲ್ಲಿದ್ದ ಹಾಗೂ ಅನುಭವಿಯಾಗಿದ್ದ ಮಿಥಾಲಿ ರಾಜ್ ರನ್ನು ಹೊರಗಿಟ್ಟಿದ್ದು, ಧೋನಿಯನ್ನು ಹೊರಗಿಟ್ಟು ಟೀಂ ಇಂಡಿಯಾ ಮಹತ್ವದ ಪಂದ್ಯ ಆಡಿದಂತೆ ಎಂದು ಅಭಿಮಾನಿಗಳು ಕಿಡಿ ಕಾರಿದ್ದಾರೆ.
ಆದರೆ ಈ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕಿ ಹರ್ಮನ್ ಪ್ರೀತ್ ಮಿಥಾಲಿಯನ್ನು ಹೊರಗಿಟ್ಟಿದ್ದಕ್ಕೆ ಪಶ್ಚಾತ್ತಾಪವಿಲ್ಲ ಎಂದಿದ್ದಾರೆ. ಏನೇ ನಿರ್ಧಾರ ತೆಗೆದುಕೊಂಡಿದ್ದರೂ ತಂಡದ ಹಿತದೃಷ್ಟಿಯಿಂದ ತೆಗೆದುಕೊಂಡಿದ್ದೇವೆ. ಕೆಲವೊಮ್ಮೆ ಅದು ಕೆಲಸ ಮಾಡಿರುತ್ತದೆ, ಕೆಲವೊಮ್ಮೆ ಕೈ ಕೊಡುತ್ತದೆ. ಅದಕ್ಕೆ ಪಶ್ಚಾತ್ತಾಪವಿಲ್ಲ ಎಂದು ಹರ್ಮನ್ ಹೇಳಿದ್ದಾರೆ. ಆದರೆ ಮಹತ್ವದ ಪಂದ್ಯಕ್ಕೆ ಮಿಥಾಲಿಯಂತಹ ಅನುಭವಿಯನ್ನು ಹೊರಗಿಟ್ಟಿದ್ದಕ್ಕೇ ಭಾರತಕ್ಕೆ ಸೋಲಾಯಿತು ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.