T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ನಲ್ಲಿ ಯಾರು ಎದುರಾಳಿ, ಯಾವಾಗ ಇಲ್ಲಿದೆ ವಿವರ
ಸೆಮಿಫೈನಲ್ ನಲ್ಲಿ ಗ್ರೂಪ್ 1 ರ ಅಗ್ರ ಸ್ಥಾನಿ ಮತ್ತು ಗ್ರೂಪ್ 2 ರ ಎರಡನೇ ತಂಡ ಮತ್ತು ಇನ್ನೊಂದು ಸೆಮಿಫೈನಲ್ ನಲ್ಲಿ ಗುಂಪು 1 ರ ಎರಡನೇ ತಂಡ ಮತ್ತು ಗುಂಪು 2 ರ ಮೊದಲ ತಂಡ ಸೆಣಸಾಡಲಿವೆ. ಎರಡು ಸೆಮಿಫೈನಲ್ ಪೈಕಿ ಮೊದಲ ಸೆಮಿಫೈನಲ್ ಮಾರ್ಚ್ 4 ರಂದು ಮತ್ತು ಎರಡನೇ ಸೆಮಿಫೈನಲ್ ಮಾರ್ಚ್ 5 ರಂದು ನಡೆಯಲಿದೆ.
ಮೊದಲ ಸೆಮಿಫೈನಲ್ ನಲ್ಲಿ ಗ್ರೂಪ್ 1 ರ ಅಗ್ರಸ್ಥಾನಿ ದಕ್ಷಿಣ ಆಫ್ರಿಕಾ ಮತ್ತು ಗುಂಪು 2 ರ ಎರಡನೇ ತಂಡ ನ್ಯೂಜಿಲೆಂಡ್ ಸೆಣಸಾಡಲಿದೆ. ಎರಡನೇ ಸೆಮಿಫೈನಲ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಎದುರಾಗಲಿವೆ. ಇದೀಗ ಭಾರತಕ್ಕೆ ಮಾರ್ಚ್ 5 ರಂದು ಎರಡನೇ ಸೆಮಿಫೈನಲ್ ನಲ್ಲಿ ಆಡಬೇಕಿದೆ.
ಇಂಗ್ಲೆಂಡ್ ವಿರುದ್ಧದ ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಭಾರತದ ಪಾಲಿಗೆ ವಾಂಖೆಡೆ ಮೈದಾನ ಲಕ್ಕಿ ಮೈದಾನವೆಂದೇ ಹೇಳಬಹುದು. ಈ ಪಂದ್ಯ 7 ಗಂಟೆಗೆ ಆರಂಭವಾಗಲಿದೆ.