ಸ್ಯಾಮ್ ಕ್ಯುರೇನ್ ಆಟ ನೋಡಿ ಚೆನ್ನೈ ಸೂಪರ್ ಕಿಂಗ್ಸ್ ಖುಷ್

ಮಂಗಳವಾರ, 30 ಮಾರ್ಚ್ 2021 (09:23 IST)
ಚೆನ್ನೈ: ಟೀಂ ಇಂಡಿಯಾ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಕ್ಯುರೇನ್ ಅಂತಿಮ ಎಸೆತದವರೆಗೂ ಛಲಬಿಡದೇ ಹೋರಾಡಿದ್ದು ನೋಡಿ ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖುಷಿಯಾಗಿದೆ.


ಈ ಬಾರಿ ಸ್ಯಾಮ್ ‍ಕ್ಯುರೇನ್ ಭಾರೀ ಮೊತ್ತಕ್ಕೆ ಚೆನ್ನೈ ತಂಡದ ಪಾಲಾಗಿದ್ದರು. ಅವರ ಹೊಡೆಬಡಿಯ ಆಟ ಮತ್ತು ಬೌಲಿಂಗ್ ಪ್ರದರ್ಶನ ಚೆನ್ನೈ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

ಇದೇ ಫಾರ್ಮ್ ಪ್ರದರ್ಶಿಸಿದರೆ ಈ ಬಾರಿ ಚೆನ್ನೈಗೆ ಮತ್ತೆ ಫೈನಲ್ ಗೇರುವ ಅವಕಾಶವಿದೆ. ಒಬ್ಬ ಉತ್ತಮ ಫಿನಿಶರ್ ಆಗಿ ಕ್ಯುರೇನ್ ಆಡಿದ ರೀತಿ ಐಪಿಎಲ್ 14 ಕ್ಕೆ ಮೊದಲು ಬೂಸ್ಟ್ ನೀಡಿದೆ. ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ತಂಡ ಈ ಬಾರಿ ಭಾರತದಲ್ಲೇ ನಡೆಯುವ ಟೂರ್ನಿಯಲ್ಲಿ ಹಳೆಯ ಫಾರ್ಮ್ ಗೆ ಮರಳುವ ನಿರೀಕ್ಷೆಯಲ್ಲಿದೆ. ಸುರೇಶ್ ರೈನಾ ಕೂಡಾ ತಂಡಕ್ಕೆ ಮರಳಿರುವುದು ಸಿಎಸ್ ಕೆಗೆ ಪ್ಲಸ್ ಪಾಯಿಂಟ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ